ಗದಗ: ಜಿಲ್ಲೆಯಲ್ಲಿ ರವಿವಾರ 13 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 316ಕ್ಕೆ ಏರಿಕೆಯಾಗಿದ್ದು, 134 ಸಕ್ರಿಯ ಪ್ರಕರಣಗಳಿವೆ.
ಹಾವೇರಿ ಜಿಲ್ಲೆ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 37 ವರ್ಷದ ವ್ಯಕ್ತಿ(ಪಿ.36323) ಸೋಂಕು ದೃಢಪಟ್ಟಿದೆ. ಲಕ್ಷ್ಮೇಶ್ವರ ನಗರದ ದಾಸರ ಓಣಿಯ 24 ವರ್ಷದ ಮಹಿಳೆ(ಪಿ.28940) ಸಂಪರ್ಕದಿಂದ ಅದೇ ಪ್ರದೇಶದ 20 ವರ್ಷದ ಮಹಿಳೆ(ಪಿ.36447)ಗೆ ಸೋಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಸುರೇಬಾನ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಮುಳಗುಂದದ 49 ವರ್ಷದ ವ್ಯಕ್ತಿ(ಪಿ.36463)ಗೆ ಸೋಂಕು ತಗುಲಿದೆ. ಬೆಂಗಳೂರು ಪ್ರವಾಸದ ಹಿನ್ನೆಲೆಯ ಗದಗ ತಾಲೂಕಿನ ಹರ್ತಿ ಗ್ರಾಮದ 37 ವರ್ಷದ ಮಹಿಳೆ(ಪಿ.36473) ಹಾಗೂ 38 ವರ್ಷದ ವ್ಯಕ್ತಿ(ಪಿ.36501) ಸೋಂಕು ಕಂಡುಬಂದಿದೆ.
ಗದಗ ಹುಡ್ಕೋ ಕಾಲೋನಿಯ 47 ವರ್ಷದ ವ್ಯಕ್ತಿ(ಪಿ.36559)ಗೆ ಸೋಂಕು ಹರಡಿದ್ದು, ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ. ಬೆಟಗೇರಿಯ ಶರಣಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ(ಪಿ.31106) ಸಂಪರ್ಕದಿಂದ ನಗರದ ಶಹಪೂರ ಪೇಟೆಯ ನಿವಾಸಿ 26 ವರ್ಷದ ಪುರುಷ (36570) ಸೋಂಕು ಖಚಿತವಾಗಿದೆ. ಲಕ್ಷ್ಮೇಶ್ವರ ಪಟ್ಟಣದ ದಾಸರ ಓಣಿ 24 ವರ್ಷದ ಮಹಿಳೆ(ಪಿ.28940) ಸಂಪರ್ಕದಿಂದಾಗಿ ಅದೇ ಪ್ರದೇಶದ 1 ವರ್ಷದ ಮಗು(ಪಿ.36586)ವಿಗೆ ಸೋಂಕು ತಗುಲಿದೆ.
ಲಕ್ಷ್ಮೇಶ್ವರದ ಇಂದಿರಾ ನಗರ 41 ವರ್ಷದ ಮಹಿಳೆ(ಪಿ.18285) ಸಂಪರ್ಕದಿಂದ ಗದಗ ತಾಲೂಕಿನ ನಾಗಾವಿಯ ಗಾಳೆಮ್ಮನ ಗುಡಿ ನಿವಾಸಿ 32 ವರ್ಷದ ವ್ಯಕ್ತಿ(ಪಿ.36616) ಹಾಗೂ 4 ವರ್ಷದ ಬಾಲಕ (ಪಿ.36634)ನಿಗೆ ಸೋಂಕು ಕಂಡುಬಂದಿದೆ.
ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದ ನರಗುಂದದ ಹೊರಕೇರಿ ಓಣಿ ನಿವಾಸಿ 19 ವರ್ಷದ ಯುವಕ (ಪಿ.36666) ನಿಗೆ ಹಾಗೂ ಗದಗಿನ ಕಾಗದಗಾರ ಓಣಿಯ 72 ವರ್ಷದ ವೃದ್ಧ(ಪಿ.36726)ನಿಗೆ ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಬೆಂಗಳೂರಿನ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ 33 ವರ್ಷದ ಪುರುಷ(ಪಿ-36686) ಗೆ ಸೋಂಕು ದೃಢಪಟ್ಟಿರುತ್ತದೆ. ಸೋಂಕಿತರನ್ನು ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾ ಧಿಕಾರಿಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಇದೇ ವೇಳೆ ಇಲ್ಲಿನ 10 ಜನ ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.