Advertisement

ಯೂಟ್ಯೂಬರ್ ನನ್ನು ಭೇಟಿ ಮಾಡಲು 250 ಕಿಮೀ ಸೈಕಲ್ ತುಳಿದ ಬಾಲಕ ; ಕೊನೆಗೆ ಆಗಿದ್ದೇನು?

10:43 AM Oct 08, 2022 | Team Udayavani |

ನವದೆಹಲಿ : ಪಂಜಾಬ್‌ನ ಪಟಿಯಾಲದ 13 ವರ್ಷದ ಬಾಲಕ ತನ್ನ ನೆಚ್ಚಿನ ಯೂಟ್ಯೂಬ್ ಸ್ಟಾರ್‌ನನ್ನು ಭೇಟಿ ಮಾಡಲು ಮೂರು ದಿನಗಳ ಕಾಲ ಸೈಕಲ್ ತುಳಿದು 250 ಕಿಲೋಮೀಟರ್ ದೂರದ ದೆಹಲಿಗೆ ತೆರಳಿ ಮನೆಯವರ ನಿದ್ದೆಗೆಡಿದಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಸುಮಾರು 1.7 ಕೋಟಿ ಚಂದಾದಾರರನ್ನು ಹೊಂದಿರುವ ಹಾಸ್ಯ ಮತ್ತು ವಿಡಂಬನಾತ್ಮಕ ಚಾನೆಲ್ ‘ಟ್ರಿಗ್ಗರ್ಡ್ ಇನ್ಸಾನ್’ ಚಾನೆಲ್ ನಡೆಸುತ್ತಿರುವ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್‌ ನ ವಿಡಿಯೋ ಗಳಿಗೆ ಮನಸೋತ ಎಂಟನೇ ತರಗತಿಯ ಬಾಲಕನೊಬ್ಬ ಯೂಟ್ಯೂಬರ್ ನನ್ನು ಭೇಟಿಯಾಗಲು ಮನೆಯವರಿಗೆ ಹೇಳದೆ ಸೈಕಲ್ ಹಿಡಿದು ಪಂಜಾಬ್ ನಿಂದ ದೆಹಲಿಗೆ ಹೊರಟಿದ್ದಾನೆ, ಸತತ ಮೂರು ದಿನಗಳಲ್ಲಿ 250 ಕಿಲೋಮೀಟರ್ ದೂರ ಕ್ರಮಿಸಿದ ಬಾಲಕ ದೆಹಲಿಯಲ್ಲಿರುವ ಯೂಟ್ಯೂಬರ್ ನ ಅಪಾರ್ಟ್ಮೆಂಟ್ ಗೆ ತೆರಳಿದ್ದಾನೆ ಆದರೆ ಅಲ್ಲಿ ಬಾಲಕನಿಗೆ ನಿರಾಸೆಯಾಗಿದೆ ಕಾರಣ ಯೂಟ್ಯೂಬರ್ ಅಷ್ಟೋತ್ತಿಗಾಗಲೇ ದುಬೈಗೆ ತೆರಳಿದ್ದನಂತೆ…

ಇತ್ತ ಬಾಲಕನ ಮನೆಯಲ್ಲಿ ಶಾಲೆಗೆ ಹೋದ ಬಾಲಕ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರ ತಂಡ ಬಾಲಕನ ಪತ್ತೆಗೆ ಶಾಲೆಯ ಮಾರ್ಗದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ, ಆದರೆ ಬಾಲಕ ಶಾಲೆಯ ಕಡೆ ಹೋಗದೆ ಬೇರೆ ಮಾರ್ಗದಲ್ಲಿ ಸಂಚರಿಸಿರುವುದು ಕಂಡುಬಂದಿದೆ, ಈ ವೇಳೆ ಪೋಷಕರು ತನ್ನ ಮಗ ನಾಪತ್ತೆಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಪೊಲೀಸರು ಬಾಲಕನ ಪತ್ತೆಗೆ ಎಲ್ಲಾ ಕಡೆಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ ಈ ವೇಳೆ ಆತ ದೆಹಲಿಗೆ ಹೋಗಿರುವು ಗೊತ್ತಾಗಿದೆ ಕೊನೆಗೆ ಆತ ಯೂಟ್ಯೂಬರ್ ನ ಅಪಾರ್ಟ್ಮೆಂಟ್ ಬಳಿ ಸೈಕಲ್ ನಿಲ್ಲಿಸಿರುವುದು ಕಂಡು ಬಂದಿದೆ. ಕೂಡಲೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿ ಪೋಷಕರ ಸಮೇತ ಪೋಲೀಸರ ತಂಡ ದೆಹಲಿಗೆ ಹೊರಟಿದೆ, ಅಷ್ಟೋತ್ತಿಗಾಗಲೇ ದೆಹಲಿ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದು, ವಿಚಾರಿಸಿದಾಗ ತಾನು ‘ಟ್ರಿಗ್ಗರ್ಡ್ ಇನ್ಸಾನ್’ ಯೂಟ್ಯೂಬರ್ ಅಭಿಮಾನಿಯಾಗಿದ್ದು ಆತನನ್ನು ಭೇಟಿಯಾಗಬೇಕೆಂದು ಬಂದಿದ್ದೇನೆ ಎಂದು ಹೇಳಿದ್ದಾನೆ ಕೊನೆಗೆ ದೆಹಲಿ ಪೊಲೀಸರು ಬಾಲಕನನ್ನು ಪಟಿಯಾಲ ಪೊಲೀಸರ ಸಮ್ಮುಖದಲ್ಲಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಇದರೊಂದಿಗೆ ಬಾಲಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ : RSS ಅಂಗಸಂಸ್ಥೆ ಸೇವಾ ಭಾರತಿಯಿಂದ ರತನ್ ಟಾಟಾ ಸೇರಿ ಹಲವು ಗಣ್ಯರಿಗೆ ಸೇವಾ ರತ್ನ ಪ್ರಶಸ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next