Advertisement

10 ದಿನಗಳ ಅಧಿವೇಶನಕ್ಕೆ 13 ಕೋಟಿ ಖರ್ಚು: ಅಭಿವೃದ್ಧಿ ಶೂನ್ಯ

10:17 AM Oct 11, 2019 | Team Udayavani |

ಬೆಳಗಾವಿ: ಕಳೆದ ವರ್ಷ ಸುವರ್ಣ ವಿಧಾನಸೌಧದಲ್ಲಿ ನಡೆದ ಹತ್ತು ದಿನಗಳ ಅಧಿವೇಶನಕ್ಕೆ ಒಟ್ಟು 13.85 ಕೋಟಿ ರೂ ವೆಚ್ಚ ಮಾಡಲಾಗಿದೆ‌. ಆದರೆ ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಧಿವೇಶನಕ್ಕೆ 13 ಕೋಟಿ ಖರ್ಚು ಮಾಡಿದ್ದರೂ ಈ ಸಮಯದಲ್ಲಿ ರೈತರ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಗಂಭೀರ ಚರ್ಚೆಗಳು ನಡೆದಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಸಾರ್ವಜನಿಕ ರ ಹಣವನ್ನು ಪೋಲು ಮಾಡಿದ್ದಾರೆ ಎಂದು ದೂರಿದರು.

ಅಧಿವೇಶನದ ಸಮಯದಲ್ಲಿ ಶಾಸಕರು.  ಅಧಿಕಾರಿಗಳು ಹಾಗೂ ಗಣ್ಯರ ವಸತಿಗಾಗಿ ನಗರದಲ್ಲಿರುವ 67 ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಕೊಠಡಿಗಳ ಬಾಡಿಗೆಗಾಗಿ ಜಿಲ್ಲಾಡಳಿತ 4.42 ಕೋಟಿ ವೆಚ್ಚ ಮಾಡಿದೆ. ಇದಲ್ಲದೆ ಅಧಿವೇಶನದ ಸಂದರ್ಭದಲ್ಲಿ ಊಟ ಹಾಗೂ ಉಪಹಾರಕ್ಕಾಗಿ 3 ಕೋಟಿ ರೂ ಹಾಗೂ ಸಚಿವಾಲಯದಿಂದ ಶಾಸಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪ್ರಯಾಣ ಮತ್ತು ದಿನಭತ್ಯೆಗಾಗಿ 2.61 ಕೋಟಿ ವೆಚ್ಚಮಾಡಲಾಗಿದೆ ಎಂದು ಭೀಮಪ್ಪ ಗಡಾದ ಹೇಳಿದರು.  ಪ್ರತಿ ಬಾರಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಸರ್ಕಾರ ವೆಚ್ಚಮಾಡುವದನ್ನು ನೋಡಿದರೆ ಈ ಅಧಿವೇಶನ ಕೇವಲ ಸಾರ್ವಜನಿಕರ ತೆರಿಗೆ ಹಣ ನುಂಗುವ ಅಧಿವೇಶನ ಆಗುತ್ತಿದೆ ಎಂದು ಗಡಾದ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next