Advertisement

ಸೇವಾಲಾಲ್‌ ಜನ್ಮಸ್ಥಳ ಅಭಿವೃದ್ಧಿಗೆ 13 ಕೋಟಿ

01:10 PM Feb 15, 2017 | |

ಹೊನ್ನಾಳಿ: ಸೇವಾಲಾಲ್‌ ಜನ್ಮಸ್ಥಳ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ 13 ಕೋಟಿ ಅನುದಾನ ನೀಡಿದ್ದು, ಜತೆಗೆ ಹದಿಮೂರುವರೆ ಎಕರೆ ಜಮೀನನ್ನು ಮಂಜೂರು ಮಾಡಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು. ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಅವರ 278ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

Advertisement

ಕಾಂಗ್ರೆಸ್‌ ಸರ್ಕಾರ ದೀನದಲಿತರ ಮತ್ತು ಹಿಂದುಳಿ ದವರ ಪರ ಕೆಲಸ ಮಾಡುತ್ತಾ ಬಂದಿದೆ. 1979ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಹಿಂದುಳಿದ ವರ್ಗದಲ್ಲಿದ್ದ ಬಂಜಾರಾ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡಲಾಯಿತು. 1993ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಬಂಜಾರಾ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಪರಿಗಣಿಸಲು ಸುತ್ತೋಲೆ ಹೊರಡಿಸಲಾಯಿತು.

ಇವೆಲ್ಲ ಬಂಜಾರಾ ಸಮುದಾಯಕ್ಕೆ ಕಾಂಗ್ರೆಸ್‌ ಏನು ಮಾಡಿದೆ ಎನ್ನುವವರಿಗೆ ಸರಿಯಾದ ಉತ್ತರವಾಗಿದೆ ಎಂದರು. ಸದಾಶಿವ ಆಯೋಗದ ವರದಿಯಲ್ಲಿ ಹಲವಾರು ಲೋಪದೋಷಗಳಿದ್ದ ಕಾರಣ ಅದನ್ನು ಜಾರಿಗೊಳಿಸಲಾಗುತ್ತಿಲ್ಲ. ಸಮಾಜ ಒಡೆಯುವ ಕೆಲಸಕ್ಕೆ ತಾವು ಕೈ ಹಾಕುವುದಿಲ್ಲ. ಎಸ್ಸಿ-ಎಸ್ಟಿ ಜನಾಂಗದ ಅಭಿವೃದ್ಧಿಗೆ ಸರ್ಕಾರ 25 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ.

ಒಗ್ಗಟ್ಟಿನಲ್ಲಿ ಯಶಸ್ಸು ಇದ್ದು, ಸಂಘಟನೆಯಿಂದ ಹೋರಾಟ ಮಾಡಿದರೆ ಎಲ್ಲ ಬೇಡಿಕೆಗಳು ಈಡೇರಲು ಸಾಧ್ಯ ಎಂದು ಹೇಳಿದರು. ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ, ಬಂಜಾರಾ ಸಮಾಜ ಅತ್ಯಂತ ಸ್ವಾಭಿಮಾನದ ಸಮಾಜವಾಗಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ದರ್ಭದಲ್ಲಿ ಬಂಜಾರಾ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು.

ಬಂಜಾರಾ ಸಮುದಾಯದ ಒಬ್ಬರನ್ನು ಕೆಪಿಸಿಸಿ ಸದಸ್ಯನನ್ನಾಗಿ ನೇಮಿಸಿದ್ದಲ್ಲದೆ ರಾಜ್ಯದ ಒಂದು ವಿವಿಗೆ ವಿಸಿ ನೇಮಕ ಮಾಡಿತ್ತು ಎಂದು ಹೇಳಿದರು. ಶಾಸಕರಾದ ನರೇಂದ್ರಸ್ವಾಮಿ, ರಾಜೀವ್‌, ಜಿಪಂ ಅಧ್ಯಕ್ಷೆ ಉಮಾರಮೇಶ್‌, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿಬಾಯಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿದ್ದರು. 

Advertisement

ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಪ್ರಾಸ್ತಾವಿಕ ಮಾತನಾಡಿದರು. ವಿಜಯ ಮಹಾಂತೇಶ್ವರಮಠದ ಸಿದ್ದಲಿಂಗದೇವರು, ಯಾದಗಿರಿ ಹರಿಸ್ವಾಮಿ, ಶಿರೂರು ಮಹಾಶಕ್ತಿ ಪೀಠದ ಕುಮಾರ್‌ಮಹಾರಾಜ್‌, ಸೇವಾಲಾಲ್‌ಪೀಠದ ಸರ್ದಾರ್‌ ಸೇವಾಲಾಲ್‌ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಲರಾಜ್‌, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿಪಂ ಸಿಇಒ ಎಸ್‌.ಅಶ್ವತಿ ಸೇರಿದಂತೆ ಜಿಪಂ, ತಾಪಂ, ಗ್ರಾಪಂ ಜನಪ್ರತಿನಿಧಿಗಳು ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next