Advertisement

ಟೆಕ್ಕಿ ಮೇಲೆ ಹಲ್ಲೆ ಪ್ರಕರಣ: 13 ಮಂದಿ ಬಂಧನ

12:02 PM Oct 20, 2017 | Team Udayavani |

ಬೆಂಗಳೂರು: ಟೆಕ್ಕಿ ನಂದಿನಿ ಮತ್ತು ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫ‌ಯಾಜ್‌ಖಾನ್‌ (50), ಮೊಹಮದ್‌ ಇಜಾರ್‌ (23), ಮೊಹಮದ್‌ ಮುಜಾಮಿಲ್‌ (25), ಸಯ್ಯದ್‌ ಮುಜೀಬ್‌ (48), ನಯಾಜ್‌ ಪಾಷ (21),ನಬೀ (29), ಶೇಖ್‌ ಏಜಾಜ್‌ (25), ಜಾವೀದ್‌ (35), ಸಾಮೀರ್‌ (32), ಅಶ್ರಫ್ ಉಲ್ಲಾ (33), ಮೌಲ (33), ಶಹಬಾಜ್‌ (20) ಬಂಧಿತರು.

Advertisement

ಇದೇ ವೇಳೆ ಯಲಹಂಕದ ದೊಡ್ಡಬೆಟ್ಟಹಳ್ಳಿಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ತೆರಳಿದ ಹೈಕೋಟ್‌ ನೇಮಿಸಿದ್ದ ಕಮಿಷನರ್‌ ಗಳ ಮೇಲೆ ದಾಳಿ ನಡೆಸಿದ 10 ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ  ಕುರಿತು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಮಾತನಾಡಿ, ಸಾಫ್ಟ್ವೇರ್‌ ಎಂಜಿನಿಯರ್‌ ನಂದಿನಿ ಮೇಲೆ ಹಲ್ಲೆ ನಡೆದ ವೇಳೆ ಪೊಲೀಸ್‌ ಸಿಬ್ಬಂದಿ ಇರಲಿಲ್ಲ.

ಆವಲಹಳ್ಳಿಯ ಟಿಪ್ಪು ವೃತ್ತದಲ್ಲಿ ಗೋವುಗಳನ್ನು ಅಕ್ರಮವಾಗಿ ಕೂಡು ಹಾಕಿದ್ದಾರೆ ಎಂದು ನಂದಿನಿ ಅ.14ರಂದು ದೂರು ನೀಡಿದ್ದರು ಎಂದು ತಿಳಿಸಿದರು. ಠಾಣೆಯಲ್ಲಿದ್ದ ನಂದಿನಿ, ಪೊಲೀಸರ ಕ್ರಮವನ್ನು ಪರೀಕ್ಷಿಸಲು ಗೋವುಗಳನ್ನು ರಕ್ಷಣೆ ಮಾಡಿದ  ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಮಾರು ಒಂದು ಸಾವಿರ ಜನರ ಗುಂಪು ಸ್ಥಳದಲ್ಲಿತ್ತು. ಸ್ಥಳಕ್ಕೆ ಹೋದ ನಂದಿನಿ ಅವರ ಕಾರು, ಪ್ರಯಾಣಿಕ ಆಟೋ ಹಾಗೂ ಮಾಂಸ  ಮಾರಾಟ ಮಾಡುವ ಅಂಗಡಿಯ ಛಾವಣಿಗೆ ಡಿಕ್ಕಿ ಹೊಡೆದಿತ್ತು.

ಇದರಿಂದ ಆಕ್ರೋಶಗೊಂಡ ಸ್ಥಳದಲ್ಲಿದ್ದ ಗುಂಪು ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದೆ.  ಘಟನೆಯಿಂದ ಗಾಬರಿಗೊಂಡು ಪಾರಾರಿಯಾಗಿ ಬಂದಿದ್ದಾರೆ. ಈ ವೇಳೆ ಪೊಲೀಸರು ಇರಲಿಲ್ಲ ಎಂದರು. ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಂದಿನಿ, ಘಟನೆ ವೇಳೆ ಪೊಲೀಸರು ಸ್ಥಳದಲ್ಲಿ ದ್ದರು. ಇದಕ್ಕೆ ತಮ್ಮ ಬಳಿ ಸಾûಾÂ ಇರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next