Advertisement

ಡೊಂಬಿವಲಿ ಶ್ರೀ ಸಾಯಿನಾಥ ಮಿತ್ರ ಮಂಡಳಿಯ 12ನೇ ವಾರ್ಷಿಕೋತ್ಸವ 

01:44 AM Feb 27, 2019 | |

ಮುಂಬಯಿ: ನಮ್ಮಲ್ಲಿನ ಉತ್ತಮ ಸಂಸ್ಕಾರ ಹಾಗೂ ಉತ್ತಮ ಕಾರ್ಯಗಳೇ ನಮ್ಮ ಸಾರ್ಥಕ ಜೀವನದ ಭದ್ರ ಬುನಾದಿಯಾಗಿದೆ. ನಮ್ಮ ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ಸಮಾಜದ ದೀನ ದುಃಖೀತರಿಗೆ ಸಹಾಯ, ಸಹಕಾರ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಆಜೆªಪಾಡಾದ ಶ್ರೀ ಅಯ್ಯಪ್ಪ ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಪಂಡಿತ್‌ ರಾಮಚಂದ್ರ ಬಾಯರ್‌ ನುಡಿದರು.

Advertisement

ಫೆ. 3ರಂದು ಡೊಂಬಿವಲಿ ಪಶ್ಚಿಮದ ಶ್ರೀ ಜ್ಞಾನೇಶ್ವರ ಮಂಗಳ ಕಾರ್ಯಾಲಯದಲ್ಲಿ ಶ್ರೀ ಸಾಯಿನಾಥ ಮಿತ್ರ ಮಂಡಳಿ 12ನೇ ವಾರ್ಷಿಕೋತ್ಸವದ ಸಾನಿಧ್ಯವಹಿಸಿ ಮಾತನಾಡಿ, ವಿದ್ಯೆ ಹಾಗೂ ವಿನಯತೆಯಿಂದ ಗಳಿಸಿದ ಸಂಪತ್ತನ್ನು ದೀನ ದುಃಖೀತರ ಏಳ್ಗೆಗಾಗಿ, ಧರ್ಮ ರಕ್ಷಣೆಗಾಗಿ ವಿನಿಯೋಗಿಸಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಶಿಕ್ಷಣ ಮತ್ತು ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡ ಮೋಹನ್‌ ಸಾಲ್ಯಾನ್‌ ಸಾರಥ್ಯದ ಶ್ರೀ ಸಾಯಿನಾಥ ಮಿತ್ರ ಮಂಡಳಿ ಎಂಬ ಈ ಪುಟ್ಟ ಸಸಿ ಮುಂಬರುವ ದಿನಗಳಲ್ಲಿ ವಿಶಾಲ ವೃಕ್ಷವಾಗಿ ಬೆಳೆಯುವುದರ ಜೊತೆಗೆ ಸಮಾಜದ ದೀನ ದಲಿತರಿಗೆ ಉತ್ತಮ ಫಲ ಹಾಗೂ ನೆರಳನ್ನು ನೀಡಿ ಸಮೃದ್ಧ ಸಮಾಜವನ್ನು ಕಟ್ಟುವಲ್ಲಿ ಮುಂದೆ ಬರಲಿ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ದೇವಿಪಾತ್ರಿ ಕಲ್ಯಾ ಪ್ರಸಾದ್‌ ಪೂಜಾರಿ ಮಾತನಾಡಿ, ಶಿರಡಿ ಸಾಯಿಬಾಬಾ ಭೀಕ್ಷಾಪಾತ್ರೆಯ ಮುಖಾಂತರ ಗಳಿಸಿದನ್ನು  ಸಮಾಜಕ್ಕೆ ಹಂಚಿದವರು. ಇಂದು ಶ್ರೀ ಸಾಯಿನಾಥ ಮಿತ್ರ ಮಂಡಳಿಯವರು ಜನತಾ ಜನಾರ್ಧನ ನೀಡಿದ ಆರ್ಥಿಕ ನೆರವಿನ ಮೂಲಕ ಅವರ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದೆ. ಮಿನಿ ತುಳುನಾಡು ಎಂದು ಕರೆಯಲ್ಪಡುವ ಡೊಂಬಿವಲಿಯಲ್ಲಿ ತುಳು-ಭಾಂದವರ ಸಾಧನೆ ಕಂಡು

ಹೃದಯ ತುಂಬಿ ಬಂದಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತಾಗಬೇಕು ಎಂದರು.

ಇನ್ನೋರ್ವ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷ ಆನಂದ ಡಿ. ಶೆಟ್ಟಿ ಎಕ್ಕಾರು ಮಾತನಾಡಿ, ಈ ಸಂಸ್ಥೆಗೆ ನಿಸ್ವಾರ್ಥ ಭಾವನೆಯಿಂದ ದುಡಿದ ದಿ| ನಾರಾಯಣ ಸನಿಲ್‌ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿರುವುದು ಅಭಿಮಾನದ ಸಂಗತಿಯಾಗಿದೆ. ಕಳೆದ 12 ವರ್ಷಗಳಿಂದ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ, ಅಕಾಶದೆತ್ತರಕ್ಕೆ ಸಂಸ್ಥೆಯು ಬೆಳೆದಿದೆ. ನಿಮ್ಮ ಕಾರ್ಯ ಹರಿಯುವ ನೀರಿನಂತೆ ಸದಾ ಸಾಗುತ್ತಿರಲಿ. ನಮ್ಮ ಸಹಕಾರ, ಪ್ರೋತ್ಸಾಹ ಸದಾ ಇದೆ ಎಂದರು.

Advertisement

ಅತಿಥಿಯಾಗಿ ಆಗಮಿಸಿದ ಯಕ್ಷಕಲಾ ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ ಮಾತನಾಡಿ, ಈ ಸಂಸ್ಥೆಗೆ 12 ವರ್ಷಗಳಾಗಿದೆ. ಆದರೆ ಈ ಸಂಸ್ಥೆಯ ಪದಾಧಿಕಾರಿಗಳು ಹಿರಿಯ ನಾಗರಿಕರಂತೆ ಸಂಸ್ಥೆಯನ್ನು ಮುನ್ನಡೆಸುವುದರ ಮೂಲಕ  ಹೃದಯ ಸಿರಿವಂತಿಕೆ ಮೆರೆದಿದ್ದಾರೆ. ಇವರ ಉತ್ತಮ ವಿಚಾರ, ಧಾರ್ಮಿಕ ಮನೋಭಾವನೆ ಅಭಿನಂದನೀಯ. ಶಿರಡಿ ಸಾಯಿಬಾಬಾ, ತಾಯಿ ಜಗದಾಂಬಿಕೆಯ ಕೃಪೆಯಿಂದ ಸಂಸ್ಥೆಯು ಸಾಧನೆಯ ಶಿಖರ ವನ್ನೇರಲಿ ಎಂದು ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಮೋಹನ್‌ ಸಾಲ್ಯಾನ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್‌ ಮೊಗವೀರ ಅವರು ಸಂಸ್ಥೆಯು ನಡೆದು ಬಂದ ಬಗೆಯನ್ನು ವಿವರಿಸಿದರು. ಸಮಾರಂಭದಲ್ಲಿ ಡೊಂಬಿವಲಿ ಪರಿಸರದ ಸಮಾಜ ಸೇವಕ, ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಡೊಂಬಿವಲಿ ಇದರ ಉಪಾಧ್ಯಕ್ಷ, ಕರ್ನಾಟಕ ಸಂಘ ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್‌. ಶೆಟ್ಟಿ ಹಾಗೂ  ಡೊಂಬಿವಲಿ ಪಶ್ಚಿಮ ವಿಭಾಗ ನವರಾತ್ರೊÂàತ್ಸವ ಮಂಡಳಿ ಕಾರ್ಯದರ್ಶಿ, ಉದ್ಯಮಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ, ಶ್ರೀ ಶನೀಶ್ವರ ಪೂಜಾ ಸಮಿತಿಯ ಸ್ಥಾಪಕ ಕಿಶೋರ್‌ ದಾಸು ಶೆಟ್ಟಿ, ಶ್ರೀ ಜೈಭವಾನಿ ಶನೀಶ್ವರ ಮಂದಿರ ಆಜೆªಂಗಾವ್‌, ಪಶ್ಚಿಮ ವಿಭಾಗ ನವರಾತ್ರೊÂàತ್ಸವ ಮಂಡಳಿ ಇದರ ಸಕ್ರಿಯ ಕಾರ್ಯಕರ್ತ ಯೋಗೇಶ್‌ ಪೂಜಾರಿ ದಂಪತಿಗಳನ್ನು  ದಿ| ನಾರಾಯಣ ಸಾಲ್ಯಾನ್‌ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನಿತ್ತು ಗೌರವಿಸಲಾಯಿತು.

ದಾನಿಗಳನ್ನು, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸದಸ್ಯ ಬಾಂಧವರಿಗೆ, ಮಕ್ಕಳಿಗೆ  ಶೈಕ್ಷಣಿಕ, ವೈದ್ಯಕೀಯ ನೆರವು ನೀಡಲಾಯಿತು. ವಿಶಾಲ್‌ ಪ್ರಕಾಶ್‌ ಶೆಟ್ಟಿ, ನಿಖೀಲ್‌ ಕರುಣಾಕರ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಿ ಅಭಿನಂದಿಸಲಾಯಿತು. ಸುನೀತಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಧರ್ಮದರ್ಶಿ ಅಶೋಕ್‌ ಶೆಟ್ಟಿ ಮತ್ತು ಪ್ರಕಾಶ್‌ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಸಂಜೀವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ವಿಠuಲ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ರಾಮಚಂದ್ರ ಬಾಯಾರ್‌, ಪ್ರಸಾದ್‌ ಸಾಲ್ಯಾನ್‌, ವಿಠಲ್‌ ಶೆಟ್ಟಿ, ಹರೀಶ್‌ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಮೋಹನ್‌ ಸಾಲ್ಯಾನ್‌, ಭಾಸ್ಕರ ಪೂಜಾರಿ, ಸುರೇಶ್‌ ಶೆಟ್ಟಿ, ಗಣೇಶ್‌ ಮೊಗವೀರ, ಸುರೇಶ್‌  ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ ಮತ್ತು ರಂಗಭೂಮಿ ಫೈನ್‌ಆರ್ಟ್ಸ್ ನೆರೂಲ್‌ ಇದರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭೃಗು ಶಾಪ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರವಿ ಆಚಾರ್ಯ, ಚೆಂಡೆಯಲ್ಲಿ ಆನಂದ ಶೆಟ್ಟಿ ಇನ್ನ, ಮದ್ದಳೆಯಲ್ಲಿ ಹರೀಶ್‌ ಸಾಲ್ಯಾನ್‌, ಮುಮ್ಮೇಳದಲ್ಲಿ ಶೇಣಿ ಶ್ಯಾಮ್‌ ಭಟ್‌, ಪ್ರಕಾಶ್‌ ಪಣಿಯೂರು, ರವಿ ಹೆಗ್ಡೆ ಹೆರ್ಮುಂಡೆ, ಅನಿಲ್‌ ಕುಮಾರ್‌ ಹೆಗ್ಡೆ, ಸುರೇಶ್‌ ಶೆಟ್ಟಿ ನಂದೊÅಳ್ಳಿ, ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ ಇವರು ಭಾಗವಹಿಸಿದ್ದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶ್‌ ಮೊಗವೀರ, ಅಧ್ಯಕ್ಷ ಮೋಹನ್‌ ಜಿ. ಸಾಲ್ಯಾನ್‌, ಉಪಾಧ್ಯಕ್ಷರುಗಳಾದ ಮೋಹನ್‌ ಪೂಜಾರಿ ಮತ್ತು ಆನಂದ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್‌ ಮೊಗವೀರ, ಗೌರವ ಕೋಶಾಧಿಕಾರಿ ರಘುರಾಮ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು,  ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 ನನ್ನ 18ನೇ ವರ್ಷದಲ್ಲಿ ಸಮ್ಮಾನ ಪಡೆದ ನಾನು ಬಹಳಷ್ಟು ಸಮ್ಮಾನವನ್ನು ಪಡೆದಿದ್ದೇನೆ. ಆದರೆ ಈ ಸಮ್ಮಾನ ನನಗೆ ಅವಿಸ್ಮರಣೀಯವಾಗಿದೆ. ಈ ಸಮ್ಮಾನ ಪಶ್ಚಿಮದ ವಿಭಾಗದ ಸಮೀಪದಲ್ಲಿ ಸಿಕ್ಕ ಸಮ್ಮಾನವಾಗಿದೆ. ನನ್ನ ಜೀವನದಲ್ಲಿ ಮೂವರು ಸ್ತಿÅàಯರಿಗೆ ವಿಶೇಷ ಗೌರವ ನೀಡಿದ್ದೇನೆ. ನನ್ನ ತಾಯಿ, ನನ್ನನ್ನು ಸಾಕಿದವರು, ನನ್ನ ಆರಾಧ್ಯ ದೇವಿ ಪಶ್ಚಿಮ ವಿಭಾಗದ ಶ್ರೀ ದುರ್ಗಾಪರಮೇಶ್ವರಿ ಹಾಗೂ ನನ್ನ ಬೆಳವಣಿಗೆಯಲ್ಲಿ ಸಹಕಾರ ನೀಡಿದ ನನ್ನ ಪತ್ನಿ. ಈ ಸಮ್ಮಾನವನ್ನು ಮೋಹನ್‌ ಸಾಲ್ಯಾನ್‌ ಅವರ ಮಿತ್ರತ್ವದಿಂದ ಒಪ್ಪಿದ್ದೇನೆ 
   – ಕಿಶೋರ್‌ ದಾಸು ಶೆಟ್ಟಿ‌, ಸಮ್ಮಾನಿತರು

 ಶಿಕ್ಷಣ, ಸಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಶ್ರೀ ಸಾಯಿನಾಥ ಮಿತ್ರ ಮಂಡಳ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದು, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರೆ ಒಂದು ಕುಟುಂಬಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ವಿದ್ಯಾರ್ಥಿಯೋರ್ವ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಹೊಂದಿ ಉದ್ಯೋಗ ಪಡೆದರೆ ಒಂದು ಕುಟುಂಬ ಉದ್ಧಾರವಾಗುತ್ತದೆ. ದೇವಸ್ಥಾನಗಳಿಗೆ ಹಣ ನೀಡುವ ಬದಲು ವಿದ್ಯಾರ್ಜನೆಗೆ ಸಹಕರಿಸುವುದು ಧರ್ಮದ ಕಾರ್ಯವಾಗಿದೆ    
   – ವಿಟಲ್‌  ಶೆಟ್ಟಿ‌, 
ಮಾಜಿ ಅಧ್ಯಕ್ಷರು :  ಡೊಂಬಿವಲಿ ಕರ್ನಾಟಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next