ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1298 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 32 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
1833 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2873281ಕ್ಕೆ ತಲುಪಿದೆ.
ರಾಜ್ಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 21481 ಇದೆ. ಸೋಂಕಿನ ಪಾಸಿಟಿವಿಟಿ ದರ 1.01% ಇದ್ದು, ಡೆತ್ ರೇಟ್ 2.46 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-5, ಬೆಳಗಾವಿ-27, ಬೆಂಗಳೂರು ಗ್ರಾಮಾಂತರ-30, ಬೆಂಗಳೂರು ನಗರ-340, ಬೀದರ್-0, ಚಾಮರಾಜನಗರ-7, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-59, ಚಿತ್ರದುರ್ಗ-7, ದಕ್ಷಿಣ ಕನ್ನಡ-288, ದಾವಣಗೆರೆ-14, ಧಾರವಾಡ-5, ಗದಗ-1, ಹಾಸನ-66, ಹಾವೇರಿ-1, ಕೊಡಗು-37, ಕೋಲಾರ-17, ಕೊಪ್ಪಳ-1, ಮಂಡ್ಯ-18, ಮೈಸೂರು-88, ರಾಯಚೂರು-0, ರಾಮನಗರ-3, ಶಿವಮೊಗ್ಗ-51, ಉಡುಪಿ-122, ಉತ್ತರ ಕನ್ನಡ-48, ವಿಜಯಪುರ-2, ಯಾದಗಿರಿ-3.