Advertisement

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 1,261 ಕಲ್ಲೆಸೆತ ಪ್ರಕರಣ

05:17 PM Mar 09, 2018 | Team Udayavani |

ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ 1,261 ಕಲ್ಲೆಸೆತದ ಪ್ರಕರಣಗಳು ನಡೆದಿವೆ. 

Advertisement

ಈ ಪೈಕಿ ಅತ್ಯಧಿಕ ಕಲ್ಲೆಸೆತದ ಪ್ರಕರಣಗಳು ನಡೆದದ್ದು ಹತ ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಬುರ್ಹಾನ್‌ ವಾನಿಯ ಹುಟ್ಟೂರಾದ ಪುಲ್ವಾಮಾದಲ್ಲಿ. ಇದರ ಬಳಿಕ ಅತ್ಯಧಿಕ ಕಲ್ಲೆಸೆತದ ಪ್ರಕರಣಗಳು ನಡೆದಿರುವುದು ಸೋಪೋರ್‌ ನಲ್ಲಿ. ಇದು ಹುರಿಯತ್‌ ನಾಯಕ ಸೈಯ್ಯದ್‌ ಗೀಲಾನಿ ಅವರ ಭದ್ರ ಕೋಟೆಯಾಗಿದೆ.

2017ರಲ್ಲಿ ಪುಲ್ವಾಮಾದಲ್ಲಿ 91 ಕಲ್ಲೆಸೆತದ ಪ್ರಕರಣಗಳು ನಡೆದಿವೆ. ಸೋಪೋರ್‌ನಲ್ಲಿ 71 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಗೃಹ ಸಚಿವಾಲಯ ತಿಳಿಸಿದೆ. 

2016ರಲ್ಲಿ ಸೋಪೋರ್‌ನಲ್ಲಿ ಸುಮಾರು 500 ಕಲ್ಲೆಸೆತದ ಘಟನೆಗಳು ನಡೆದಿದ್ದವು. ಉಗ್ರ ಬುರ್ಹಾನ್‌ ವಾನಿಯ ಹತ್ಯೆಯ ಬಳಿಕ ಉಂಟಾದ ಕಾಶ್ಮೀರ ಅಶಾಂತಿಯ ವೇಳೆಯಲ್ಲಿ ನಡೆದಿರುವ ಗರಿಷ್ಠ ಪ್ರಕರಣ ಇದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next