Advertisement

ವಿರುಪಾಪುರಗಡ್ಡೆ: ವಿದೇಶಿಯರು ಸೇರಿದಂತೆ 126 ಜನರ ರಕ್ಷಣೆ; ಆತಂಕದಲ್ಲಿ ಇನ್ನೂ ಹಲವರು

10:04 AM Aug 13, 2019 | keerthan |

ಕೊಪ್ಪಳ: ತುಂಗಾಭದ್ರಾ ಜಲಾಶಯದಿಂದ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ವಿದೇಶಿಗರು, ಸ್ಥಳಿಯರು ಸಿಲುಕಿದ್ದು ಈವರೆಗೂ ಎನ್ ಡಿಆರ್ ಎಫ್ ತಂಡ  ವಿದೇಶಿಗರು ಸೇರಿದಂತೆ 126  ಭಾರತೀಯ ನಿವಾಸಿಗಳನ್ನು ರಕ್ಷಣೆ ಮಾಡಿದೆ.

Advertisement

ಎನ್ ಡಿಆರ್ ಎಫ್ ತಂಡದಲ್ಲಿ ಒಂದೇ ಬೋಟ್ ಇರುವುದರಿಂದ ಬೋಟ್ ನಲ್ಲಿ ಪ್ರತಿ ಭಾರಿ 8 ಜನರನ್ನು ಮಾತ್ರ ಕರೆ ತರಲಾಗುತ್ತಿದೆ. ಕೊಪ್ಪಳ ಡಿಸಿಪಿ ಸುನೀಲ್ ಕುಮಾರ ಸ್ಥಳದಲ್ಲೆ ಉಳಿದು ರಕ್ಷಣಾ ಕಾರ್ಯದ ಪ್ರಗತಿಯನ್ನು ವೀಕ್ಷಿಸುತ್ತಿದ್ದಾರೆ.

ವಿರುಪಾಪುರ ಗಡ್ಡೆಯಲ್ಲಿ 350ಕ್ಕೂ ಹೆಚ್ಚು ಜನರಿದ್ದ ಕಾರಣ ಬೇರಡೆಯಿಂದ ಹೆಚ್ಚುವರಿ ಮೂರು ಬೋಟ್ ಕರೆ ತರಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

 

Advertisement

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಆಗಮಿಸಿದ್ದು ರಕ್ಷಣಾ ಕಾರ್ಯದ ಮಾಹಿತಿ ಪಡೆದರು. ಸಿ ಸುನೀಲ್ ಕುಮಾರ ಹಾಗೂ ಎಸಿ ಸಿ.ಡಿ ಗೀತಾ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next