Advertisement

ವಿವೇಕಾನಂದರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿ

03:46 PM Sep 13, 2018 | Team Udayavani |

ಗಜೇಂದ್ರಗಡ: ಭಾರತೀಯರು ವಿಶ್ವ ಭಾತೃತ್ವ ಭಾವನೆ ಹೊಂದಿದ್ದಾರೆ ಎಂದು ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟು ವಿದೇಶಿಗರು ಪ್ರಶಂಸಿಸುವಂತೆ ಮಾಡಿದ ಸ್ವಾಮಿ ವಿವೇಕಾನಂದರು ಭಾರತದ ಧ್ರುವತಾರೆಯಾಗಿ ಎಲ್ಲರ ಮನದಾಳದಲ್ಲಿ ಶಾಶ್ವತ ನೆಲೆಯೂರಿದ್ದಾರೆ ಎಂದು ಪ್ರಾಧ್ಯಾಪಕ ಕೆ. ಸಿದ್ದೇಶ ಹೇಳಿದರು.  ಪಟ್ಟಣದ ಬಿ.ಎಸ್‌ ಸಿಂಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಭಾರತೀಯ ಸಂಸ್ಕೃತಿ ವಿದ್ವತ್‌ ನಿಂದ ಲೋಕ ಪ್ರಸಿದ್ಧಿಯಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿಯಾಗಿವೆ. ಭಾರತ ಯುವ ಶಕ್ತಿಯಿಂದ ಕೂಡಿದ ದೊಡ್ಡ ರಾಷ್ಟ್ರವಾಗಿದೆ. ಇತರೆ ರಾಷ್ಟ್ರಗಳು ನಮ್ಮ ದೇಶದ ಕಡೆ ನೋಡುತ್ತಿವೆ. ನಮ್ಮಲ್ಲಿರುವ ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿ ಭಾರತವನ್ನು ನೋಡಬಹುದು ಎಂದರು. ಉದಾತ್ತ ಸಂಸ್ಕೃತಿಯನ್ನೇ ಜೀವಾಳವಾಗಿರಿಸಿ ವೈಭವ ಶಾಲಿಯಾಗಿರುವ ಈ ಪುಣ್ಯಭೂಮಿಯಲ್ಲಿ ಜ್ಞಾನಕ್ಕೆ ಪೂಜ್ಯ ಹಾಗೂ ಪವಿತ್ರ ಸ್ಥಾನವಿದೆ. ನಹೀ ಜ್ಞಾನೇನ ಸದೃಶ್ಯಂ ಪವಿತ್ರವಿಹ ವಿದ್ಯತೇ ಎಂಬ ವಾಕ್ಯ ಜ್ಞಾನದ ಮಹತ್ವವನ್ನು ಸಾರುತ್ತಿವೆ. ಇಂತಹ ಸಂದೇಶ ಬೆಳಗಲು ಶಿಕ್ಷಣದ ಅವಶ್ಯಕತೆ ಸಮುದಾಯಕ್ಕಿದೆ. ಈ ನಿಟ್ಟಿನಲ್ಲಿ ಸಮಾಜದ ಏಳ್ಗೆಗೆ ಅಡ್ಡಲಾಗಿರುವ ತೊಡಕುಗಳ ನಿವಾರಣೆಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ದಾರಿದೀಪವಾಗಿವೆ ಎಂದರು.

ಪ್ರಾಚಾರ್ಯ ಎಸ್‌.ಎಸ್‌ ಕೆಂಚನಗೌಡರ ಮಾತನಾಡಿ, ಆರ್ಥಿಕತ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳ ಇಂದಿನ ಸಮಸ್ಯಗಳಿಗೆ ಅಂದೇ ಅವರು ಪರಿಹಾರ ಸೂಚಿಸಿದ್ದರು. ನರೇಂದ್ರನೆಂಬ ಹೆಸರಿನ ಕಂದ ಮುಂದೊಂದು ದಿನ ಇಡೀ ವಿಶ್ವಕ್ಕೆ ಚಿರ ಪರಿಚಿತನಾಗಿ ನಿರಂತರ ಜನಮಾನಸದಲ್ಲಿ ಉಳಿಯುವ ವ್ಯಕ್ತಿಯಾಗುತ್ತಾನೆ ಎನ್ನುವ ವಿಶ್ವಾಸ ಹೆತ್ತ ಕರುಳಿಗಾಗಲಿ ಅಥವಾ ಸಾಕ್ಷಾತ ಬ್ರಹ್ಮನೂ ಊಹಿಸದಷ್ಟು ಸಾಧನೆಯನ್ನು ಕೇವಲ ಆಧ್ಯಾತ್ಮ ಶಾಂತಿ ಮಂತ್ರದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು. 

ಇದೇವೇಳೆ ಪ್ರಬಂಧ, ಚರ್ಚಾ ಸ್ಪರ್ಧೆಗಳು ನಡೆದವು. ಬಿ.ವಿ. ಮುನವಳ್ಳಿ, ಮಹೇಂದ್ರ ಜಿ, ಡಾ| ಪಿ.ಎಚ್‌. ಕ್ಯಾರೇಕೊಪ್ಪ, ಐ.ಎನ್‌. ಡಾವಣಗೇರಿ, ಲಕ್ಷ್ಮೀ, ಸರಸ್ವತಿ ಕೆ, ಲಕ್ಷ್ಮಣ  ಎಂ, ಹಿತೇಶ ಬಿ, ಐ.ಎಂ. ರಾಠೊಡ, ಮಹಾಂತೇಶ ಜೀವಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next