Advertisement

ಎಲ್ಲೂರು ಗ್ರಾ.ಪಂ.ನಲ್ಲಿ 1.25 ಕೋಟಿ ರೂ. ಅಭಿವೃದ್ಧಿ ಕಾರ್ಯ

07:40 AM Aug 10, 2017 | Team Udayavani |

ಪಡುಬಿದ್ರಿ: ಅದಾನಿ ಒಡೆತನದ ಯುಪಿಸಿಎಲ್‌ ಸಂಸ್ಥೆ ತನ್ನ ಸಿಎಸ್‌ಆರ್‌ ಯೋಜನೆಯಡಿ ಎಲ್ಲೂರು ಗ್ರಾಮದಲ್ಲಿ ಮೂಲಸೌಕರ್ಯ ವೃದ್ಧಿಗಾಗಿ 2017-18ನೇ ಸಾಲಿಗೆ 1.25 ಕೋ.ರೂ.ಗಳ ಅನುಮೋದನಾ ಪತ್ರವನ್ನು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌ ಅವರಿಗೆ ನೀಡಿದೆ. ಇದೇ ವೇಳೆ ಎಲ್ಲೂರು ಗ್ರಾ.ಪಂ. ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌ ಅವರು 2017-18ನೇ ಸಾಲಿನಲ್ಲಿ ಎಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಅವರಿಗೆ ಹಸ್ತಾಂತರಿಸಿದರು.

Advertisement

3.75 ಕೋ.ರೂ. ಘೋಷಣೆ
ಈ ಸಂದರ್ಭ ಕಿಶೋರ್‌ ಆಳ್ವ ಮಾತನಾಡಿ, ಎಲ್ಲೂರು ಗ್ರಾಮಕ್ಕೆ ಅದಾನಿ ಸಂಸ್ಥೆಯು ಸಿ.ಎಸ್‌.ಆರ್‌. ಅನುದಾನದಡಿ 3 ವರ್ಷಗಳ ಅವಧಿಗೆ ಒಟ್ಟು 3.75 ಕೋಟಿ ರೂ. ನೆರವನ್ನು ಘೋಷಿಸಿದೆ. 2016-17ನೇ ಸಾಲಿನಲ್ಲಿ 76 ಲ.ರೂ.ಗಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅದಾನಿ ಯುಪಿ ಸಿಎಲ್‌ ಪೂರ್ಣಗೊಳಿಸಿದೆ ಎಂದರು.

ಸಿಮೆಂಟ್‌ ಪ್ಲಾಂಟ್‌, ಶುದ್ಧ ನೀರು ಪೂರೈಕೆ ಯೋಜನೆ
ಯುಪಿಸಿಎಲ್‌ ಸದ್ಯ 2 ಘಟಕಗಳಿಂದ ಉತ್ಪತ್ತಿಯಾಗುವ ಹಾರು ಬೂದಿಯನ್ನು ಸಂಪೂರ್ಣವಾಗಿ ಉಪಯೋಗಿಸಲು ಹಾಗೂ ಯೋಜನೆ ವಿಸ್ತರಣೆಯ  2,800 ಮೆ.ವ್ಯಾ. ಘಟಕದಲ್ಲಿ ಉತ್ಪತ್ತಿಯಾಗುವ ಹಾರುಬೂದಿಯನ್ನು ಸದ್ಬಳಕೆ
ಮಾಡಲು ಸ್ಥಾವರದ ವಠಾರದಲ್ಲಿ ಸಿಮೆಂಟ್‌ ಗೆùಂಡಿಂಗ್‌ ಘಟಕವನ್ನು ಸ್ಥಾಪಿಸಲು ನಿರ್ಣಯಸಲಾಗಿದೆ. ಸಿಮೆಂಟ್‌
ಘಟಕದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ದೊರೆಯುತ್ತವೆ. ಇದಲ್ಲದೆ ಮಂಗಳೂರಿನ ಕೈಗಾರಿಕಾ ಸಂಸ್ಥೆಗಳ ಚಟುವಟಿಕೆಗಳಿಗೆ ನೀರಿನ ಬೇಡಿಕೆ ಇದ್ದು, ಅದನ್ನು ಪೂರೈಸಲು ಸಮುದ್ರ ನೀರನ್ನು ಶುದ್ಧೀಕರಿಸುವ ಡಿಸಲನೈಸೇಷನ್‌ ಘಟಕವನ್ನು ಸ್ಥಾಪಿಸಲು ಅದಾನಿ ಸಮೂಹವು ಯೋಜನೆಯನ್ನು ಹಾಕಿಕೊಳ್ಳÛಲಿದೆ ಎಂದು ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು.

ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌ ಮಾತನಾಡಿದರು. ಸದಸ್ಯರಾದ ಪೂರ್ಣಿಮಾ ಪ್ರಸಾದ್‌, ರವಿರಾಜ್‌ ರಾವ್‌, ಸದಾಶಿವ ಶೆಟ್ಟಿ, ಲೀಲಾ ದೇವಾಡಿಗ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಯುಪಿಸಿಎಲ್‌ ಕಂಪೆನಿಯ ಎಜಿಎಂ ಗಿರೀಶ್‌ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಅದಾನಿ ಫೌಂಡೇಶನ್‌ನ ವಿನೀತ್‌ ಅಂಚನ್‌, ಸುಕೇಶ್‌ ಸುವರ್ಣ, ಅನುದೀಪ್‌ ಪೂಜಾರಿ ಹಾಗೂ ಬೆಳಪು ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next