ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1229 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 13 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.28) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1289 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2889809 ತಲುಪಿದೆ.
ಇನ್ನು ರಾಜ್ಯದಲ್ಲಿಂದು ಸಕ್ರಿಯ ಪ್ರಕರಣಗಳ ಸಂಖ್ಯೆ 18897 ಇದೆ. ಸೋಂಕಿನ ಪಾಸಿಟಿವಿಟಿ ದರ 0.66% ಹಾಗೂ ಡೆತ್ ರೇಟ್ 1.05 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-5, ಬೆಳಗಾವಿ-29, ಬೆಂಗಳೂರು ಗ್ರಾಮಾಂತರ-15, ಬೆಂಗಳೂರು ನಗರ-310, ಬೀದರ್-0, ಚಾಮರಾಜನಗರ-7, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-35, ಚಿತ್ರದುರ್ಗ-15, ದಕ್ಷಿಣ ಕನ್ನಡ-207, ದಾವಣಗೆರೆ-12, ಧಾರವಾಡ-7, ಗದಗ-2, ಹಾಸನ-103, ಹಾವೇರಿ-3, ಕಲಬುರಗಿ-2, ಕೊಡಗು-75, ಕೋಲಾರ-15, ಕೊಪ್ಪಳ-2, ಮಂಡ್ಯ-21, ಮೈಸೂರು-82, ರಾಯಚೂರು-0, ರಾಮನಗರ-3, ಶಿವಮೊಗ್ಗ-42, ತುಮಕೂರು-44, ಉಡುಪಿ-146, ಉತ್ತರ ಕನ್ನಡ-42, ವಿಜಯಪುರ-1, ಯಾದಗಿರಿ-0.