Advertisement

122 ಕಿ.ಮೀ. ಎನ್‌ಫೀಲ್ಡ್‌ ಬೈಕ್‌ ಸವಾರಿ ಮಾಡಿದ ಅರುಣಾಚಲ ಸಿಎಂ

10:31 AM Oct 14, 2019 | Team Udayavani |

ಇಟಾನಗರ: ಮುಖ್ಯಮಂತ್ರಿಗಳು ರಸ್ತೆ ವೀಕ್ಷಣೆಗೆ ಕಾರಿನಲ್ಲಿ, ಕೆಲವೊಮ್ಮೆ ಸಂಪುಟ ಸಚಿವರೊಂದಿಗೆ ಬಸ್ಸಿನಲ್ಲಿ ಹೋಗುವುದು ಸಾಮಾನ್ಯ.
ಆದರೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಯಿಂಗ್‌ಕಿಯಾಂಗ್‌ ಮತ್ತು ಪಸಿಘಾಟ್‌ ಮಧ್ಯೆ ಬೈಕ್‌ ಸವಾರಿ ಮಾಡಿ ಅಚ್ಚರಿಗೆ ಎಲ್ಲರನ್ನೂ ಕೆಡವಿದ್ದಾರೆ.

Advertisement

ಅದೂ 122 ಕಿ.ಮೀ. ದೂರದ ದಾರಿಯನ್ನು ಅವರು ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ 650 ಬೈಕ್‌ನಲ್ಲಿ ಕ್ರಮಿಸಿದ್ದಾರೆ. ಈ ದಾರಿ ಡಾಮರೀಕರಣವಾಗಿ ಅತ್ಯುತ್ತಮವಾಗಿದ್ದು ಬೈಕರ್‌ಗಳಿಗೆ ಹೇಳಿಮಾಡಿಸಿದ್ದಾಗಿದೆ. ಆದ್ದರಿಂದ ಆಸಕ್ತರು ಇಲ್ಲಿಗೊಮ್ಮೆ ಭೇಟಿ ಕೊಡಿ ಎಂದು ರಾಜ್ಯದ ಪ್ರವಾಸೋದ್ಯಮದ ಕುರಿತೂ ಅವರು ಪ್ರಚಾರ ಮಾಡಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next