Advertisement

ಪೋಲೋ, ವೆಂಟೋ ಕಾರುಗಳ ತಯಾರಿಕೆ ಸ್ಥಗಿತ?

09:07 PM Feb 22, 2022 | Team Udayavani |

ನವದೆಹಲಿ: ಜರ್ಮನಿ ಮೂಲದ ಕಾರು ತಯಾರಿಕಾ ಸಂಸ್ಥೆಯಾದ ಫೋಕ್ಸ್‌ ವ್ಯಾಗನ್‌, ಭಾರತದಲ್ಲಿ ತಾನು ಉತ್ಪಾದಿಸುವ ಪೋಲೋ ಹಾಗೂ ವೆಂಟೋ ಹೆಸರಿನ ಕಾರುಗಳ ತಯಾರಿಕೆಯನ್ನು ನಿಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪೋಲೋ ಕಾರು ಹ್ಯಾಚ್‌ಬ್ಯಾಕ್‌ ಮಾದರಿಯದ್ದಾಗಿದ್ದರೆ, ವೆಂಟೋ ಕಾರು ಸೆಡಾನ್‌ ಮಾದರಿಯದ್ದು. ಉತ್ಪಾದನೆಯನ್ನು ನಿಲ್ಲಿಸುವ ದಿನಾಂಕವನ್ನು ಕಂಪನಿ ಅಧಿಕೃತವಾಗಿ ಪ್ರಕಟಿಸಿಲ್ಲ.

ಆದರೆ, 2022ರ ಜುಲೈನಿಂದ ಸೆಪ್ಟಂಬರ್‌ ಅವಧಿಯಲ್ಲಿ ಇವುಗಳ ತಯಾರಿಕೆ ನಿಲ್ಲಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ರೂ. ಅಡ್ವಾನ್ಸ್‌?

ಇವರೆಡೂ ಕಾರುಗಳು ಮಹಾರಾಷ್ಟ್ರದ ಚಕನ್‌ ಎಂಬಲ್ಲಿರುವ ಫೋಕ್ಸ್‌ ವೋಗನ್‌ ಕಂಪನಿಯ ಕಾರು ತಯಾರಿಕಾ ಘಟಕದಲ್ಲಿ ತಯಾರಾಗುತ್ತಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next