Advertisement

18 ಕಾಮುಕರಿಂದ 12ರ ಬಾಲೆ ಮೇಲೆ 7 ತಿಂಗಳು ಕಾಲ ಅತ್ಯಾಚಾರ

01:53 PM Jul 17, 2018 | Team Udayavani |

ಚೆನ್ನೈ:12 ವರ್ಷದ ಬಾಲಕಿ ಮೇಲೆ ಹಲವಾರು ಕಾಮುಕರು ಸುಮಾರು 7 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಚೆನ್ನೈನ ಅಪಾರ್ಟ್ ಮೆಂಟ್ ನಲ್ಲಿ ನಡೆದಿದ್ದು, ಪೊಲೀಸರು ಕಟ್ಟಡದ ಸೆಕ್ಯುರಿಟಿ ಗಾರ್ಡ್ ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದಾರೆ.

Advertisement

ಬಾಲಕಿಗೆ ಸಾಫ್ಟ್ ಡ್ರಿಂಕ್ಸ್ ನಲ್ಲಿ ಅಮಲು ಬರಿಸುವ ಪದಾರ್ಥ ಸೇರಿಸಿ ಈ ಕೃತ್ಯ ಎಸಗಿದ್ದು, ಬಳಿಕ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಬಂಧಿತರಲ್ಲಿ ಲಿಫ್ಟ್ ಆಪರೇಟರ್ ಹಾಗೂ ನೀರು ಸರಬರಾಜು ಮಾಡುವ ವ್ಯಕ್ತಿಯೂ ಸೇರಿದ್ದಾನೆ.

7 ತಿಂಗಳುಗಳ ಕಾಲ ತನ್ನ ಮೇಲೆ ನಡೆದ ಅತ್ಯಾಚಾರದ ಘಟನೆಯನ್ನು ಈಕೆ ಮೊದಲು ತನ್ನ ದೊಡ್ಡ ಅಕ್ಕನ ಬಳಿ ಹೇಳಿಕೊಂಡಿದ್ದಳು. ಬಳಿಕ ಪೋಷಕರಿಗೆ ವಿಷಯ ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ತದನಂತರ ಭಾನುವಾರ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಭಾನುವಾರ ಬಾಲಕಿಯನ್ನು ಕಿಲ್ಪಾಕ್ ಮೆಡಿಕಲ್ ಕಾಲೇಜಿಗೆ ಕರೆದೊಯ್ದು ಪರೀಕ್ಷೆ ನಡೆಸಿದ್ದರು. ಆ ಬಾಲಕಿ ಮೇಲೆ ಹಲವಾರು ಮಂದಿ ಅತ್ಯಾಚಾರ ಎಸಗಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದರು. ಮಹಿಳಾ ಕೋರ್ಟ್ ನಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲು ಮಾಡಿಕೊಂಡ ಬಳಿಕ ಪೊಲೀಸರು ಪೋಸ್ಕೋ ಕಾಯ್ದೆಯಡಿ 18 ಮಂದಿಯನ್ನು ಬಂಧಿಸಿರುವುದಾಗಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next