Advertisement

ಹೈದರಾಬಾದ್‌ ಅಪಾರ್ಟ್‌ಮೆಂಟ್‌ ಲಿಫ್ಟ್ ಗೆ ಸಿಲುಕಿ 12ರ ಬಾಲಕನ ಸಾವು

11:32 AM May 25, 2018 | Team Udayavani |

ಹೈದರಾಬಾದ್‌ : ಬೇಸಗೆ ರಜಾ ದಿನಗಳಲ್ಲಿ ತನ್ನ ಶಿಕ್ಷಣದ ಖರ್ಚಿಗಾಗಿ ಹಣ ಸಂಪಾದಿಸಲು ಪೇಪರ್‌ ಹಾಕುವ ಹುಡುಗನಾಗಿ ದುಡಿಯುತ್ತಿದ್ದ 12 ವರ್ಷ ಪ್ರಾಯದ, ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಇಲ್ಲಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಪೇಪರ್‌ ಹಾಕುವ ಸಲುವಾಗಿ ಲಿಫ್ಟ್ ಏರಿದಾಗ ಲಿಫ್ಟ್ ನ ಕಬ್ಬಿಣದ ಗ್ರಿಲ್‌ ಮತ್ತು ಗೋಡೆಯ ನಡುವೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಲಿಫ್ಟ್  ಗ್ರಿಲ್‌ ಮತ್ತು ಗೋಡೆಯ ನಡುವೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಅದಾಗಾಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. 

ಮೃತ ಬಾಲಕನು ಪೇಪರ್‌ ಹಾಕುವ ಕೆಲಸ ಮಾಡಿ ತಿಂಗಳಿಗೆ 1,000 ರೂ. ಸಂಪಾದಿಸುತ್ತಿದ್ದ ಮತ್ತು ಕೂಲಿಕಾರ್ಮಿಕರಾಗಿರುವ ತನ್ನಹೆತ್ತವರಿಗೆ ಆರ್ಥಿಕವಾಗಿ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾಚಿಗುಡ ಪೊಲೀಸ್‌ ಠಾಣೆ ಪೊಲೀಸರು ನ್ಯೂಸ್‌ ಪೇಪರ್‌ ಏಜಂಟ್‌ ವಿರುದ್ಧ  ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಫ‌ಲಿತಾಂಶವನ್ನು ನೋಡಿಕೊಂಡು ಅಪಾರ್ಟ್‌ಮೆಂಟ್‌ ಸಂಕೀರ್ಣದ ಮಾಲಕನ ವಿರುದ್ಧವೂ ಕೇಸು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next