Advertisement

‘ವಿಡಿಯೋ ಗೇಮ್ಸ್ ಬಿಟ್ಟು ಓದಿನತ್ತ ಗಮನಹರಿಸು’ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ

08:02 AM Jul 22, 2020 | Mithun PG |

ಮುಂಬೈ: ವಿಡಿಯೋ ಗೇಮ್ಸ್ ಆಡಬೇಡವೆಂದ ತಾಯಿ ಮಾತಿಗೆ ಮನನೊಂದು 12 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬಯಿನಲ್ಲಿ ನಡೆದಿದೆ.

Advertisement

ಜುಲೈ 20ರ ಸೋಮವಾರ ಮಧ್ಯಾಹ್ನದ ವೇಳಗೆ ಈ ಬಾಲಕ ಮೊಬೈಲ್ ಮೂಲಕ ವಿಡಿಯೋ ಗೇಮ್ ಆಡುತ್ತಿದ್ದು, ಇದನ್ನು ಗಮನಿಸಿದ ಆತನ ತಾಯಿ ಪೋನ್ ತೆಗೆದಿಟ್ಟು ಓದಿನ ಕಡೆ ಗಮನಹರಿಸು ಎಂದು ಸೂಚನೆ ನೀಡಿದ್ದರು.

ಇದರಿಂದ ಕುಪಿತಗೊಂಡ ಬಾಲಕ ಕೂಡಲೇ ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಆ ಬಳಿಕ ತುಂಬಾ ಹೊತ್ತಾದರೂ ಬಾಗಿಲು ತೆರೆಯದಿದ್ದನ್ನು ಗಮನಿಸಿದ ಪೋಷಕರು ಗಾಬರಿಗೊಂಡಿದ್ದಾರೆ.

ಬಳಿಕ ಡೋರ್ ಮುರಿದು ಕೋಣೆಗೆ ಪ್ರವೇಶಿಸಿದಾಗ 12 ವರ್ಷದ ಬಾಲಕ ಫ್ಯಾನ್ ಗೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಹಾಸ್ಪತ್ರೆಗೆ ಸಾಗಿಸಲಾಯಿತಾದರು ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದ. ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ(ADR) ದಾಖಲಾಗಿದೆ.  ಮಾತ್ರವಲ್ಲದೆ ಬಾಲಕ ತಂದೆಯ ಹೇಳಿಕೆಯನ್ನು ಆಧರಿಸಿ ತನಿಖೆ ನಡೆಯುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next