Advertisement

12 ಶಾಲೆಗಳು ಧ್ವಂಸ

09:53 AM Aug 04, 2018 | Team Udayavani |

ಕರಾಚಿ : ಪಾಕಿಸ್ಥಾನದ ಗಿಲ್ಗಿಟ್ -ಬಾಲ್ಟಿಸ್ಥಾನ ಪ್ರದೇಶದಲ್ಲಿ ಅಪರಿಚಿತರ ಗುಂಪು ಬಾಲಕಿಯರ 12 ಶಾಲೆಗಳನ್ನು ಸುಟ್ಟುಹಾಕಿದೆ. ಗಿಲ್ಗಿಟ್ ನಿಂದ 130 ಕಿಮೀ ದೂರದ ಚಿಲಾಸ್‌ ಪಟ್ಟಣದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಅಲ್ಲದೇ, ದಿಯಾಮೆರ್‌ ಜಿಲ್ಲೆಯಾದ್ಯಂತ ಹಲವಾರು ಶಾಲೆಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಈ ಘಟನೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಶಾಲೆಗಳ ಮೇಲೆ ಉಗ್ರರು ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಭದ್ರತೆ ಒದಗಿಸಿ ಎಂದು ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next