Advertisement

ಜಿಲ್ಲೆಯಲ್ಲಿ ಶೇ.12ರಷ್ಟು ಅಪೌಷ್ಟಿಕ ಮಕ್ಕಳು

03:20 PM Apr 01, 2021 | Team Udayavani |

ಮೈಸೂರು: ಮೈಸೂರು ಜಿಲ್ಲೆ 2023ರೊಳಗೆಅಪೌಷ್ಟಿಕತೆಯಿಂದ ಮುಕ್ತವಾಗಬೇಕು. ಪ್ರತಿಹೆಣ್ಣುಮಗಳು ಗರ್ಭಿಣಿಯಾದ ಸಂದರ್ಭದಲ್ಲಿಅವರಿಗೆ ಸರಿಯಾದ ಆಹಾರ ಪದ್ಧತಿಯ ಬಗ್ಗೆತಿಳಿಸಿದರೆ ಅವರಿಗೆ ರಕ್ತಹೀನತೆ ಬರುವುದಿಲ್ಲಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಆಯುಷ್‌ಇಲಾಖೆ ಹಾಗೂ ಮಾತೃಶ್ರೀ ವಿದ್ಯಾ ಶಿಕ್ಷಣಸಂಸ್ಥೆಯ ಸಹಯೋಗದಲ್ಲಿ ಬುಧವಾರ ಜಿಲ್ಲಾಪಂಚಾಯತಿಯಲ್ಲಿ ನಡೆದ ಪೋಷಣ್‌ಪಖ್ವಾಡ್‌ ಸಮಾರೋಪದಲ್ಲಿಮಾತನಾಡಿದರು.

ಮೈಸೂರು ಜಿಲ್ಲೆಯಲ್ಲಿ 135 ಮಕ್ಕಳು ತೀವ್ರಅಪೌಷ್ಟಿಕತೆಯಲ್ಲಿದ್ದು, ಶೇ.12ರಷ್ಟುಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿದ್ದಾರೆ.ಅಲ್ಲದೆ ಜಿಲ್ಲೆಯಲ್ಲಿ ಅನಿಮಿಯಾ (ರಕ್ತಹೀನತೆ)ಹೆಚ್ಚಾಗಿದ್ದು ಇದು ಹೆಣ್ಣು ಮಕ್ಕಳಲ್ಲೇಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತರಲ್ಲೂಅನೀಮಿಯಾ, ಅಪೌಷ್ಟಿಕತೆ ಇರುತ್ತದೆ. ನೀವುಒಮ್ಮೆ ನಿಮ್ಮ ಅನೀಮಿಯಾ ಪ್ರಮಾಣವನ್ನುಪರೀಕ್ಷಿಸಿಕೊಳ್ಳಿ ಎಂದು ಕಾರ್ಯಕ್ರಮದಲ್ಲಿದ್ದಅಂಗನವಾಡಿ ಕಾರ್ಯಕರ್ತರಿಗೆ ಸಲಹೆನೀಡಿದರು.ಕರ್ನಾಟಕಲ್ಲಿ ಪ್ರಾಚೀನ ಪದ್ಧªತಿಯ ಪೌಷ್ಟಿಕಅಡುಗೆಯನ್ನೇ ಸೇವಿಸಲಾಗುತ್ತಿತ್ತು.

ಇಂದಿನಕಾಲದಲ್ಲಿಯೂ ಅದೇ ಆಹಾರ ಪದ್ಧತಿಅನುಸರಿಸಿದ್ದರೆ ಯಾವ ಅಪೌಷ್ಟಿಕತೆಯೂಇರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿಆಹಾರ ಪದ್ಧತಿ ಬದಲಾಗಿದೆ ಎಂದರು.

ಪ್ರೇರೇಪಿಸಿ: ಜಿಲ್ಲಾ ಆರೋಗ್ಯಾಧಿಕಾರಿಡಾ.ಟಿ.ಅಮರ್‌ನಾಥ್‌ ಮಾತನಾಡಿ, ಜನವರಿಹಾಗೂ ಫೆಬ್ರವರಿಯಲ್ಲಿ ಕೋವಿಡ್ ವನ್ನುನಿಯಂತ್ರಣಕ್ಕೆ ತರಲಾಗಿತ್ತು. ಆದರೆ, ಇತ್ತೀಚಿನದಿನಗಳಲ್ಲಿ ಕೊರೊನಾ ಪ್ರಕರಣಗಳುಹೆಚ್ಚಾಗುತ್ತಿವೆ. ಕೊರೊನಾ ಹೀಗೆಹೆಚ್ಚಾಗುತ್ತಿರಲು ಸಾರ್ವಜನಿಕರ ನಿರ್ಲಕ್ಷ್ಯವೇಕಾರಣ. ಕೊರೊನಾ ಪ್ರಕರಣಗಳು ಹೆಚ್ಚಾದರೆನಮ್ಮ ಇಲಾಖೆಯೇ ಹೆಚ್ಚು ಶ್ರಮಪಡಬೇಕಾಗುತ್ತದೆ. ಮುಂದೆ ಪ್ರಕರಣಗಳುಹೆಚ್ಚಾಗಬಾರದೆಂದರೆ ಜನರಿಗೆ ಲಸಿಕೆಯ ಬಗ್ಗೆತಿಳಿಸಿ ಅವರು ಲಸಿಕೆ ಪಡೆದುಕೊಳ್ಳುವಂತೆಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆಬಿ.ಸಿ.ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ,ಜಿಪಂ ಸಿಇಒ ಎ.ಎಂ.ಯೋಗೀಶ್‌, ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಉಪನಿರ್ದೇಶಕಿ ಕೆ.ಪದ್ಮ, ಆರೋಗ್ಯ ಮತ್ತುಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ಮಂಜುನಾಥನ್‌ಇತರರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next