Advertisement

ದ.ಕ.: ಬುಧವಾರ 12 ಮಂದಿಗೆ ಸೋಂಕು; ಸೋಂಕಿಗೆ ಮತ್ತೊಂದು ಸಾವು; ಉಡುಪಿ: 14 ಮಂದಿಗೆ ಪಾಸಿಟಿವ್‌

01:34 AM Jun 25, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಮತ್ತೂಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಹೊಸದಾಗಿ 12 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಉಳ್ಳಾಲ ಮೂಲದ 66 ವರ್ಷದ ಮಹಿಳೆ ಮೃತಪಟ್ಟವರು. ಅಧಿಕ ರಕ್ತದೊತ್ತಡ, ಮಧು ಮೇಹದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು ಮಂಗಳವಾರ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಸಾವನ್ನಪ್ಪಿದರು.

12 ಮಂದಿಗೆ ಕೋವಿಡ್ 19 ಸೋಂಕು ದೃಢ
ಜಿಲ್ಲೆಯಲ್ಲಿ ಹೊಸದಾಗಿ 12 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಐಎಲ್‌ಐಯಿಂದ ಬಳಲುತ್ತಿದ್ದ 71 ವರ್ಷದ ವ್ಯಕ್ತಿ, 50 ವರ್ಷದ ವ್ಯಕ್ತಿ, 47 ವರ್ಷದ ವ್ಯಕ್ತಿ, 58 ವರ್ಷದ ವ್ಯಕ್ತಿ, 25 ವರ್ಷದ ವ್ಯಕ್ತಿ, 26 ವರ್ಷದ ವ್ಯಕ್ತಿ, 42 ವರ್ಷದ ವ್ಯಕ್ತಿ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 59 ವರ್ಷದ ವ್ಯಕ್ತಿ, ಶಾರ್ಜಾದಿಂದ ಆಗಮಿಸಿದ್ದ 29 ವರ್ಷದ ಯುವಕ, 51 ವರ್ಷದ ಮಹಿಳೆ, 25 ವರ್ಷದ ಯುವತಿ, 24 ವರ್ಷದ ಯುವತಿ, 42 ವರ್ಷದ ವ್ಯಕ್ತಿಗೆ ಕೋವಿಡ್ 19 ದೃಢಪಟ್ಟಿದೆ. ಕೋವಿಡ್ 19 ಸೋಂಕು ದೃಢಪಟ್ಟ ಐಎಲ್‌ಐನಿಂದ ಬಳಲುತ್ತಿದ್ದ ಏಳು ಮಂದಿ ಮಂಗಳೂರಿನ ಆಸುಪಾಸಿನ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ. ಆದರೆ ಯಾವ ಪ್ರದೇಶದವರು ಎಂಬ ಮಾಹಿತಿ ಲಭ್ಯವಾಗಿಲ್ಲ.

Advertisement

45 ಮಂದಿ ಬಿಡುಗಡೆ
ಕೋವಿಡ್ 19 ಸೋಂಕು ದೃಢಪಟ್ಟು ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಪೈಕಿ ಜೂ. 21ರಂದು ದಾಖಲಾಗಿದ್ದ 56 ವರ್ಷದ ವ್ಯಕ್ತಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಎರಡನೇ ಹಂತದ ಗಂಟಲ ದ್ರವ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ.

248 ವರದಿ ಬರಲು ಬಾಕಿ
ಬುಧವಾರ ಸ್ವೀಕರಿಸಲಾದ ಒಟ್ಟು 45 ಮಾದರಿಗಳ ವರದಿ ಪೈಕಿ 12 ಪಾಸಿಟಿವ್‌, 33 ನೆಗೆಟಿವ್‌ ಬಂದಿದೆ.

ಉಡುಪಿ: 14 ಮಂದಿಗೆ ಪಾಸಿಟಿವ್‌
ಜಿಲ್ಲೆಯಲ್ಲಿ ಬುಧವಾರ 51 ಮಂದಿಗೆ ಕೋವಿಡ್ 19 ನೆಗೆಟಿವ್‌ ಮತ್ತು 14 ಮಂದಿಗೆ ಪಾಸಿಟಿವ್‌ ವರದಿಯಾಗಿದೆ. 14 ಜನರಲ್ಲಿ ಒಂಬತ್ತು ಮಂದಿ ಮಹಾರಾಷ್ಟ್ರದಿಂದ, ಒಬ್ಬರು ಬೆಂಗಳೂರಿನಿಂದ ಬಂದವರು. ನಾಲ್ವರು ಸ್ಥಳೀಯರಾಗಿದ್ದು ಇವರಲ್ಲಿ ಮೂವರು ಸೋಂಕಿತರ ಸಂಪರ್ಕ ಹೊಂದಿದ್ದಾರೆ. ಇವರೆಲ್ಲ ಮಣಿಪುರದ ಲ್ಯಾಬ್‌ ಟೆಕ್ನಿಶಿಯನ್‌ ಸಂಪರ್ಕಿತರು.

ಮಣಿಪಾಲ ಆಸ್ಪತ್ರೆಯ ಸ್ಟಾಫ್ ನರ್ಸ್‌ ಒಬ್ಬರಿಗೆ ಸೋಂಕು ತಗಲಿದ್ದು ಇವರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ನರ್ಸ್‌ ಅವರಿಂದ 65 ಮಂದಿಗೆ ಸಂಪರ್ಕವಾಗಿದ್ದು ಅವರೆಲ್ಲರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ಸೋಂಕಿತರಲ್ಲಿ ಏಳು ಪುರುಷರು, ಆರು ಮಹಿಳೆಯರು, ಓರ್ವ ಬಾಲಕನಾಗಿದ್ದಾನೆ.

ಒಂಬತ್ತು ಮಂದಿ ಕಾರ್ಕಳದವರು, ಐವರು ಉಡುಪಿ ತಾಲೂಕಿನವರು. ಬುಧವಾರ ಒಂಬತ್ತು ಮಂದಿ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಐವರು ಡಾ| ಟಿಎಂಎ ಪೈ ಆಸ್ಪತ್ರೆಯಿಂದ, ಮೂವರು ಕುಂದಾಪುರ ತಾ. ಆಸ್ಪತ್ರೆಯಿಂದ ಮತ್ತು ಒಬ್ಬರು ಕಾರ್ಕಳ ತಾ. ಆಸ್ಪತ್ರೆಯಿಂದ.

ಬುಧವಾರ 107 ಜನರ ಗಂಟಲ
ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 13,733 ಜನರ ಮಾದರಿ ಸಂಗ್ರಹಿಸಿದ್ದು 12,233 ಜನರಿಗೆ ನೆಗೆಟಿವ್‌ ಮತ್ತು 1,102 ಮಂದಿಗೆ ಪಾಸಿಟಿವ್‌ ವರದಿಯಾಗಿದೆ. ಒಟ್ಟು 987 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 113 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 398 ಜನರ ವರದಿ ಬರಬೇಕಾಗಿದೆ.

ಶಿರ್ವ: ವೃದ್ಧನಿಗೆ ಸೋಂಕು
ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಸೊರ್ಕಳದ 67 ವರ್ಷದ ವೃದ್ಧರೋರ್ವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಕಾಸರಗೋಡು: 6 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಕೋವಿಡ್ 19 ಸೋಂಕು ದೃಢೀಕರಿಸಲಾಗಿದೆ. ರೋಗ ಬಾಧಿತರೆಲ್ಲರೂ ವಿದೇಶದಿಂದ ಬಂದವರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ.ರಾಮದಾಸ್‌ ತಿಳಿಸಿದ್ದಾರೆ. ಕುವೈಟ್‌ನಿಂದ ಆಗಮಿಸಿದ್ದ 35 ವರ್ಷದ ವ್ಯಕ್ತಿ, 48 ವರ್ಷದ ಮಹಿಳೆ, ಶಾರ್ಜಾದಿಂದ ಬಂದ 32 ವರ್ಷದ ವ್ಯಕ್ತಿ, 40 ವರ್ಷದ ವ್ಯಕ್ತಿ, ದುಬಾೖಯಿಂದ ಆಗಮಿಸಿದ್ದ 25 ವರ್ಷದ ಮಹಿಳೆ, 45 ವರ್ಷದ ವ್ಯಕ್ತಿಗೆ ಸೋಂಕು ಖಚಿತಗೊಂಡಿದೆ.

ಜಿಲ್ಲೆಯಲ್ಲಿ 5,464 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5082 ಮಂದಿ, 382 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. 100 ಮಂದಿಯ ಸ್ಯಾಂಪಲ್‌ ತಪಾಸಣೆಗೆ ಕಳುಹಿಸಲಾಗಿದೆ. 235 ಮಂದಿಯ ಫಲಿತಾಂಶ ಬರಬೇಕಾಗಿದೆ.

152 ಮಂದಿಗೆ ಸೋಂಕು
ರಾಜ್ಯದಲ್ಲಿ ಬುಧವಾರ 152 ಮಂದಿಗೆ ಸೋಂಕು ದೃಢೀಕರಿಸಲಾಗಿದ್ದು 81 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 98 ಮಂದಿ ವಿದೇಶದಿಂದ ಬಂದವರು. 46 ಮಂದಿ ಇತರ ರಾಜ್ಯಗಳಿಂದ ಬಂದವರು.

ಮಡಿಕೇರಿ: 14 ಪ್ರಕರಣ
ಕೊಡಗು ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 14 ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 22ಕ್ಕೇರಿದೆ. ಇವರಲ್ಲಿ ಮೂರು ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದೀಗ 19 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next