Advertisement

ಚಾ.ನಗರ: 12 ಹೊಸ ಪ್ರಕರಣಗಳು ದೃಢ, ಬೆಂಗಳೂರಿನಿಂದ ಬಂದವರಲ್ಲಿ ಪತ್ತೆಯಾಗುತ್ತಿದೆ ಸೋಂಕು

06:29 PM Jul 16, 2020 | keerthan |

ಚಾಮರಾಜನಗರ: ಹತ್ತು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 12 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದಿನ 12 ದೃಢ ಪ್ರಕರಣಗಳಲ್ಲಿ 7 ಮಂದಿ ಬೆಂಗಳೂರಿನಿಂದ, ಇಬ್ಬರು ಮೈಸೂರಿನಿಂದ ಬಂದವರು.

Advertisement

ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 217ಕ್ಕೇರಿದೆ. ಆದರೆ ಇವರಲ್ಲಿ 135 ಮಂದಿ ಗುಣಮುಖರಾಗಿದ್ದಾರೆ. 79 ಸಕ್ರಿಯ ಪ್ರಕರಣಗಳಿವೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಂದ ಜಿಲ್ಲೆಯಲ್ಲಿ ಒಟ್ಟು 3 ಜನ ಮೃತಪಟ್ಟಿದ್ದಾರೆ.

ಇಂದು ಒಟ್ಟು 772 ಜನರ ಗಂಟಲು ದ್ರವ ಮಾದರಿಗಳ ಪರೀಕ್ಷೆಯಲ್ಲಿ ನಡೆಸಿದ್ದು ಅದರಲ್ಲಿ 12 ಮಾದರಿಗಳು ಪಾಸಿಟಿವ್ ಆಗಿದೆ. ಉಳಿದ 760 ಪ್ರಕರಣಗಳು ನೆಗೆಟಿವ್ ಆಗಿವೆ.

12 ಪ್ರಕರಣಗಳಲ್ಲಿ ಗುಂಡ್ಲುಪೇಟೆಗೆ 5, ಕೊಳ್ಳೇಗಾಲಕ್ಕೆ 4, ಚಾಮರಾಜನಗರ, ಯಳಂದೂರು, ಹನೂರಿಗೆ ತಲಾ 1 ಪ್ರಕರಣ ಸೇರಿವೆ.

ಪ್ರಕರಣಗಳ ವಿವರ:
ಗುಂಡ್ಲುಪೇಟೆ ತಾಲೂಕು: 27 ವರ್ಷದ ಯುವಕ ಸಂಪಿಗೆಪುರ, 24 ವರ್ಷದ ಯುವಕ ಬೊಮ್ಮಲಾಪುರ. 10 ವರ್ಷದ ಬಾಲಕಿ ಗುಂಡ್ಲುಪೇಟೆ. 40 ವರ್ಷದ ಮಹಿಳೆ, ಬೊಮ್ಮಲಾಪುರ. 52 ವರ್ಷದ ಮಹಿಳೆ ತೆರಕಣಾಂಬಿ.

Advertisement

ಕೊಳ್ಳೇಗಾಲ ತಾಲೂಕು:   21 ವರ್ಷದ ಯುವಕ, ಮಧುವನಹಳ್ಳಿ.  27 ವರ್ಷದ ಯುವತಿ, ಕೊಳ್ಳೇಗಾಲ ಮೋಳೆ. 24 ವರ್ಷದ ಯುವಕ ಜಾಗೇರಿ. 40 ವರ್ಷದ ಪುರುಷ, ಕೊಳ್ಳೇಗಾಲ ಪಟ್ಟಣ.

ಚಾಮರಾಜನಗರ ತಾಲೂಕು: 20 ವರ್ಷದ ಯುವತಿ, ಅರಳೀಪುರ.

ಯಳಂದೂರು ತಾಲೂಕು: 35 ವರ್ಷದ ಪುರುಷ, ಮಾಂಬಳ್ಳಿ. (ಮೈಸೂರಿನಲ್ಲಿ ವಾಸವಿದ್ದರು)

ಹನೂರು ತಾಲೂಕು: 65 ವರ್ಷದ ವೃದ್ಧೆ, ಅಜ್ಜೀಪುರ.

ಇವರೆಲ್ಲರೂ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next