Advertisement

Tehran: ಕುಟುಂಬದ 12 ಜನರನ್ನು ಗುಂಡಿಕ್ಕಿ ಕೊಂದ!

09:38 PM Feb 17, 2024 | Team Udayavani |

ಟೆಹ್ರಾನ್‌: ಕೌಟುಂಬಿಕ ವ್ಯಾಜ್ಯದ ಹಿನ್ನೆಲೆಯಲ್ಲಿ ಒಡ ಹುಟ್ಟಿದ ಸಹೋದರ, ಜನ್ಮ ನೀಡಿದ ತಂದೆ ಸೇರಿ ಸುಮಾರು 12 ಸಂಬಂಧಿಕರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಕೊಂದಿರುವ ಅಮಾನವೀಯ ಘಟನೆ ಇರಾನ್‌ನಲ್ಲಿ ನಡೆದಿದೆ.

Advertisement

ದಾಳಿ ನಡೆಸಿದಾತ ನನ್ನು ಸ್ಥಳದಲ್ಲಿಯೇ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆಗೈದಿದೆ. ಆರೋಪಿಯು ಅತ್ಯಾಧುನಿಕ ಕಲಾಶ್‌ನಿಕೋವ್‌ ರೈಫ‌ಲ್‌ ಬಳಸಿ ದಾಳಿ ನಡೆಸಿದ್ದ ಎಂದು ವರದಿಯಾಗಿದೆ. ಕೇವಲ ಬೇಟೆಗಾರಿಕೆ ಬಂದೂಕುಗಳಿಗೆ ಮಾತ್ರ ಪರವಾನಗಿ ನೀಡಲಾಗುವ ಇರಾನ್‌ನಲ್ಲಿ, ಸಾಮೂಹಿಕ ಗುಂಡಿನ ದಾಳಿಗಳು ಅತ್ಯಂತ ವಿರಳ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next