Advertisement

ಮಧ್ಯ ಪ್ರದೇಶ : ಎಸ್‌ಯುವಿ –ವ್ಯಾನ್‌ ಮುಖಾಮುಖೀ ಢಿಕ್ಕಿ: 12 ಸಾವು

05:29 AM Jan 29, 2019 | Team Udayavani |

ಉಜ್ಜೆ„ನ್‌ : ಮಧ್ಯಪ್ರದೇವದ ಉಜ್ಜೆ„ನ್‌ ಜಿಲ್ಲೆಯಲ್ಲಿ ವ್ಯಾನ್‌ ಒಂದು ಇಂದು ನಸುಕಿನ ವೇಳೆ  ಎಸ್‌ಯುವಿ ವಾಹನವೊಂದಕ್ಕೆ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರ ಸಹಿತ ಒಂದೇ ಕುಟುಂಬದ ಒಟ್ಟು 12 ಮಂದಿ ಮೃತಪಟ್ಟು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು  ಸೇರಿದ್ದಾರೆ. 

Advertisement

ನಸುಕಿನ 12.30ರ ಸುಮಾರಿಗೆ ಈ ಅವಘಡ ರಾಮಗಢ ಪ್ರದೇಶದಲ್ಲಿ ಸಂಭವಿಸಿತು. ಸಂತ್ರಸ್ತರೆಲ್ಲರೂ ಉಜ್ಜೆ„ನ್‌ ನಿವಾಸಿಗಳು. ಇವರು ನಗದಾ ನಗರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿ ಊರಿಗೆ ಮರಳುತ್ತಿದ್ದರು ಎಂದು ಭೇರೂಗಢ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಜೈ ಸಿ ರಾಮ್‌ ಬಾರ್ಡೆ ತಿಳಿಸಿದ್ದಾರೆ.

ಎಸ್‌ಯುವಿ ವಾಹನಕ್ಕೆ ವ್ಯಾನು ಮುಖಾಮುಖೀ ಢಿಕ್ಕಿ ಹೊಡೆದ ರಭಸಕ್ಕೆ ಎಲ್ಲ 12 ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಇಂದೋರ್‌ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಬಾರ್ಡೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next