Advertisement

ಸೂಪರ್‌ವೈಸ್ಡ್ ಕ್ವಾರಂಟೈನ್‌ ಸೆಂಟರ್‌ನಲ್ಲಿ 12 ಮಂದಿ

06:24 PM Apr 04, 2020 | Suhan S |

ದಾವಣಗೆರೆ: ಶುಕ್ರವಾರ ಮತ್ತೆ ಒಬ್ಬರನ್ನು ಸೂಪರ್‌ವೈಸ್ಡ್ ಕ್ವಾರಂಟೈನ್‌ ಸೆಂಟರ್‌ನಲ್ಲಿ ಇರಿಸಲಾಗಿದೆ. ಒಟ್ಟಾರೆಯಾಗಿ 12 ಜನರನ್ನು ಸೂಪರ್‌ವೈಸ್ಡ್ ಕ್ವಾರಂಟೈನ್‌ ಸೆಂಟರ್‌ನಲ್ಲಿ ಇರಿಸಿದಂತಾಗಿದೆ.

Advertisement

ಜಿಲ್ಲೆಯಲ್ಲಿ ಮಾ.4 ರಿಂದ ಈ ವರೆಗೆ 376 ಜನರು ಅವಲೋಕನಗೆ ಒಳಗಾಗಿದ್ದಾರೆ. ಅವರಲ್ಲಿ ಶುಕ್ರವಾರ ಮೂವರು ಸೇರಿದ್ದಾರೆ. ಈವರೆಗೆ 60 ಜನರು 28 ದಿನಗಳ ಅವಲೋಕನ ಅವಧಿ ಪೂರ್ಣಗೊಳಿಸಿದ್ದಾರೆ. 277 ಜನರು 14 ದಿನಗಳ ಅವಲೋಕನ ಅವಧಿ ಪೂರ್ಣಗೊಳಿಸಿದ್ದಾರೆ.

ಶುಕ್ರವಾರ ಒಬ್ಬರು ಒಳಗೊಂಡಂತೆ 45 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇಬ್ಬರು ಒಳಗೊಂಡಂತೆ 31 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಇಂದು ಇಬ್ಬರು ಒಳಗೊಂಡಂತೆ ಈವರೆಗೆ 26 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವಿದೇಶದಲ್ಲಿದ್ದ 9 ಜನರು ದಾವಣಗೆರೆ ಜಿಲ್ಲೆಯ ವಿವಿಧೆಡೆ ಆಗಮಿಸಿ, ವಾಪಾಸ್ಸಾಗಿದ್ದಾರೆ. ವಿದೇಶದಿಂದ ಆಗಮಿಸಿದ್ದ 15 ಜನರು ಇಲ್ಲಿಂದ ಬೇರೆ ಬೇರೆ ಜಿಲ್ಲೆಗೆ ತೆರಳಿದ್ದಾರೆ. ಶುಕ್ರವಾರ 10 ಒಳಗೊಂಡಂತೆ ಈವರೆಗೆ ಕೋವಿಡ್ 19 ವೈರಸ್‌ಗೆ ಸಂಬಂಧಿಸಿದಂತೆ ಪರೀಕ್ಷೆಗೆ ಕಳಿಸಲಾಗಿದ್ದ 61 ಮಾದರಿಯಲ್ಲಿ 48 ಮಾದರಿಗಳಲ್ಲಿ ನೆಗೆಟಿವ್‌ ಎಂಬ ವರದಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next