Advertisement

12 ಸಹೋದ್ಯೋಗಿಗಳ ಕೊಂದ ಸರಕಾರಿ ನೌಕರ!

12:41 AM Jun 02, 2019 | mahesh |

ವಾಷಿಂಗ್ಟನ್‌: ಸರಕಾರಿ ಉದ್ಯೋಗಿಯೊಬ್ಬ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿ 12 ಮಂದಿಯನ್ನು ಹತ್ಯೆಗೈದ ಘಟನೆ ಅಮೆರಿಕದ ವರ್ಜೀನಿಯಾದಲ್ಲಿನ ಸರಕಾರಿ ಕಟ್ಟಡದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದಾರೆ. ದೇಶದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಶೂಟೌಟ್‌ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರ್ಜೀನಿಯಾ ಬೀಚ್‌ ಸಿಟಿಯ ಎಂಜಿನಿಯರ್‌ ಆಗಿರುವ ಡೀ ವೇನ್‌(40) ಎಂಬಾತ ಪಬ್ಲಿಕ್‌ ಯುಟಿಲಿಟಿ ಕಟ್ಟಡದ ಹಲವು ಮಹಡಿಗಳಿಗೆ ತೆರಳಿ, ಏಕಾಏಕಿ ತನ್ನ ಬಂದೂಕಿನಿಂದ ಗುಂಡಿನ ಮಳೆಗರೆದಿದ್ದಾನೆ. ಈ ವೇಳೆ 12 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೂ ಬಂದೂಕುಧಾರಿ ಗುಂಡಿನ ಚಕಮಕಿ ನಡೆಸಿದ್ದು, ಕೊನೆಗೆ ಪೊಲೀಸರ ಗುಂಡಿಗೆ ಆರೋಪಿಯೂ ಬಲಿಯಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next