Advertisement

12.50 ಕೋ. ರೂ. ವೆಚ್ಚ ಯೋಜನೆ ಸ್ಥಳಕ್ಕೆ ರೈ ಭೇಟಿ

08:50 PM Jun 14, 2019 | Team Udayavani |

ಬಂಟ್ವಾಳ: ಫಲ್ಗುಣಿ ನದಿ ಕರಿಯಂಗಳ – ಮನೇಲು ಗ್ರಾಮ ಸಂಪರ್ಕದ ಪಶ್ಚಿಮವಾಹಿನಿ ಅನುದಾನದ ಪೊಳಲಿ ಚೆಕ್‌ಡ್ಯಾಂ ಸ್ಥಳಕ್ಕೆ ಜೂ. 14 ರಂದು ಭೇಟಿ ನೀಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಕಾಮಗಾರಿ ಪ್ರಗತಿ ಬಗ್ಗೆ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದರು.

Advertisement

ಪಶ್ಚಿಮವಾಹಿನಿ ಯೋಜನೆಯಲ್ಲಿ ಪೊಳಲಿ ಚೆಕ್‌ ಡ್ಯಾಂಗೆ 12.50 ಕೋಟಿ ರೂ. ಮಂಜೂರಾತಿ ಆಗಿದೆ. ಡ್ಯಾಂ 171.6 ಮೀ. ಉದ್ದ, ತಳಮಟ್ಟದಿಂದ 4 ಮೀ. ಎತ್ತರಕ್ಕೆ ನೀರು ಸಂಗ್ರಹ, 8 ಮೀ.ಎತ್ತರದಲ್ಲಿ 3.75 ಮೀ. ಅಗಲದ ಸೇತುವೆ ನಿರ್ಮಾಣ ಆಗಲಿದೆ. ಇದರಲ್ಲಿ ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಿದೆ ಎಂದರು.ಇತಿಹಾಸ ಪ್ರಸಿದ್ಧ ಪೊಳಲಿ ದೇವಾಲಯಕ್ಕೆ ಮನೇಲಿನಿಂದ ಭಂಡಾರ ಬರಲು ಅನುಕೂಲ ಆಗಲಿದೆ.

ಹಿಂದೆ ನದಿಯಲ್ಲಿ ದೋಣಿ ದಾಟಿ ಬರಬೇಕಾಗಿತ್ತು. ಈ ಚೆಕ್‌ ಡ್ಯಾಂ ಬಳಿಕ ಸರಾಗ ಸಂಚಾರಕ್ಕೆ ಅನುಕೂಲ ಆಗಲಿದೆ ಎಂದರು. ಡ್ಯಾಂನಲ್ಲಿ ಒಟ್ಟು 23 ಪಿಲ್ಲರ್‌ಗಳಿದ್ದು, 2019ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭವಾಗಿದೆ. 2020ರ ಮಾರ್ಚ್‌ ತಿಂಗಳಿಗೆ ಕಾಮಗಾರಿ ಮುಕ್ತಾಯಗೊಳ್ಳುವುದು. ಈಗಾಗಲೇ ಬೆಡ್‌ ಕೆಲಸ ಮುಗಿದಿದೆ. ಇನ್ನು ಪಿಲ್ಲರ್‌ ಏರಿಸಿ, ರಸ್ತೆ ನಿರ್ಮಾಣ ಕಾಮಗಾರಿ ಮಳೆಗಾಲ ಮುಗಿದ ತತ್‌ಕ್ಷಣದಲ್ಲಿ ಎಂಜಿನಿಯರಿಂಗ್‌ ವಿಭಾಗದವರು ನಿರ್ವಹಿಸುವರು ಎಂದು ತಿಳಿಸಿದರು. ಪಶ್ಚಿಮವಾಹಿನಿಯು ದ.ಕ. ಜಿಲ್ಲೆಯಲ್ಲಿ ಹರಿಯುವ ನದಿಗಳಿಗೆ ಕೃಷಿ ಉದ್ದೇಶದ ಅಂತರ್ಜಲ ಉಳಿಕೆ ಸರಣಿ ಡ್ಯಾಂ ನಿರ್ಮಾಣ ಯೋಜನೆಯಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಸಚಿವನಾಗಿ ಮೂರು ಯೋಜನೆಗಳಿಗೆ ಮಂಜೂರಾತಿ ದೊರೆತಿದೆ. ಅದನ್ನು ಶೀಘ್ರವಾಗಿ ಮುಕ್ತಾಯ ಮಾಡಿಸುವಲ್ಲಿ ಪ್ರಯತ್ನಿಸುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಇದಾಗಿದ್ದು, ಅನುದಾನವು ದೊರೆತಿದೆ ಎಂದರು.

ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌, ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದೀಪ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ದಿನೇಶ್‌ ಶಾಂತಿ, ಗ್ರಾ.ಪಂ. ಸದಸ್ಯ ದೇವಪ್ಪ ಕರ್ಕೇರ, ಪ್ರಮುಖರಾದ ಜಗದೀಶ ಕೊಯಿಲ, ಶಿವಾನಂದ ರೈ, ಪ್ರಪುಲ್ಲಾ ರೈ ಉಪಸ್ಥಿತರಿದ್ದರು.

ಮಂಗಳೂರು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾ.ನಿ. ಎಂಜಿನಿಯರ್‌ ಕೃಷ್ಣಕುಮಾರ್‌, ಜೂನಿಯರ್‌ ಎಂಜಿನಿಯರ್‌ ಪ್ರಸನ್ನ ಡ್ಯಾಂ ಬಗ್ಗೆ ಅಂಕಿಅಂಶ ಮಾಹಿತಿ ನೀಡಿದರು.

Advertisement

ಪುಚ್ಚಮೊಗರು: ಚೆಕ್‌ಡ್ಯಾಂ ಕಾಮಗಾರಿ ವೀಕ್ಷಣೆ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ವ್ಯಾಪ್ತಿಯ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಇಲ್ಲಿನ ಪುಚ್ಚಮೊಗರು ಫಲ್ಗುಣಿ ಹೊಳೆಗೆ 7 ಕೋಟಿ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದ್ದು, ಇದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಪುಚ್ಚಮೊಗರುವಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಲ್ಲಿ 7 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೆಕ್‌ ಡ್ಯಾಂ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ, ಈ ಯೋಜನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆಯಾಗಿದೆ.ಬಂಟ್ವಾಳ ತಾಲೂಕಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಮೂರು ಚೆಕ್‌ಡ್ಯಾಂ ನಿರ್ಮಾಣದ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಹೇಳಿದರು.

ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕಪೆìಯಲ್ಲಿ 15 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಚೆಕ್‌ಡ್ಯಾಂನ ವಿನ್ಯಾಸ ಬದಲಾವಣೆಗೊಳ್ಳಲಿದ್ದು, ಮರು ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌, ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದೀಪ್‌ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ್‌ ಸುಂದರ ಶಾಂತಿ, ಗ್ರಾ.ಪಂ. ಸದಸ್ಯರಾದ ಜಗದೀಶ ಕೊçಲ, ದೇವಪ್ಪ ಕರ್ಕೇರ, ಪ್ರಮುಖರಾದ ಪ್ರಪುಲ್ಲ ರೈ, ಶಿವಾನಂದ ರೈ, ಅಶೋಕ್‌ ಆಚಾರ್ಯ, ಸೀತಾರಾಮ ಶೆಟ್ಟಿ, ಎಂಜಿನಿಯರುಗಳಾದ ಪ್ರಸನ್ನ, ಕೃಷ್ಣಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next