Advertisement
ರವಿವಾರದಂದು ಜಿಲ್ಲೆಯಲ್ಲಿ 119 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದೂ ಸಹ ಜಿಲ್ಲೆಯಲ್ಲಿ ಓರ್ವ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ.
Related Articles
Advertisement
ತಾಲೂಕುವಾರು ಪಾಸಿಟಿವ್: ಬೀದರ್ ನಗರ- ತಾಲೂಕಿನಲ್ಲಿ 42 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸಂಖ್ಯೆ 1267ಕ್ಕೆ ತಲುಪಿದೆ. ಭಾಲ್ಕಿ ತಾಲೂಕಿನಲ್ಲಿ 34 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 516ಕ್ಕೆ ಏರಿಕೆಯಾಗಿದೆ.
ಔರಾದ- ಕಮಲನಗರ ತಾಲೂಕಿನಲ್ಲಿ 17 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 531ಕ್ಕೆ ಏರಿದೆ. ಹುಮನಾಬಾದ್- ಚಿಟಗುಪ್ಪ ತಾಲೂಕಿನಲ್ಲಿ 14 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 680ಕ್ಕೆ ಏರಿಕೆ ಆಗಿದೆ.
ಬಸವಕಲ್ಯಾಣ- ಹುಲಸೂರು ತಾಲೂಕಿನ 561 ಜನರಿಗೆ ಸೋಂಕು ತಗುಲಿದೆ. ಅನ್ಯ ಜಿಲ್ಲೆ ಮತ್ತು ರಾಜ್ಯಗಳ ಮೂವರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 22ಕ್ಕೆ ಹೆಚ್ಚಳವಾಗಿದೆ