ದರೂ 117 ಕೋಟಿ ರೂ. ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬಿಡ್‌ಗೆ ಕಂಪೆನಿಗಳು ಹಿಂದೇಟು ಹಾಕಿವೆ.
Advertisement
ಆರೋಗ್ಯ ಇಲಾಖೆ ಅಧೀನದ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ…) ಸಂಸ್ಥೆಯು ಔಷಧ ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಪೂರೈಸುತ್ತಿದೆ. ಆದರೆ 2020-21ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಟೆಂಡರ್ ನಡೆದಿರಲಿಲ್ಲ. 2021-22ರಲ್ಲಿ ಅಗತ್ಯ ಔಷಧ ಪೂರೈಸುವಲ್ಲಿ ನಿಗ ಮ ವಿಫಲವಾಗಿತ್ತು. ಈ ಹಿಂದೆ ಔಷಧ ಪೂರೈಸಿದ್ದ ಕಂಪೆನಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದಿಂದ 117 ಕೋಟಿ ರೂ. ನೀಡಲು ಬಾಕಿ ಇದೆ. ಹೀಗಾಗಿ 2022-23ನೇ ಸಾಲಿಗೆ ಆಹ್ವಾನಿಸಿರುವ ಟೆಂಡರ್‌ನಲ್ಲಿ ಬಿಡ್‌ಗೆ ಪ್ರತಿಷ್ಠಿತ ಕಂಪನಿಗಳು ಹಿಂದೇಟು ಹಾಕುತ್ತಿವೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಔಷಧ ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಕನಿಷ್ಠ 3 ತಿಂಗಳು ಬೇಕು. ಇತ್ತ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಬೇಕಿರುವ ಔಷಧ ಇಲ್ಲದೆ ರೋಗಿಗಳು ಹೈರಾಣಾಗಿದ್ದಾರೆ.
ಔಷಧ ಸಂಗ್ರಹಣೆಗಾಗಿ 2022-23ನೇ ಸಾಲಿಗೆ 650 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. 731 ಔಷಧ ಖರೀದಿಗೆ 30 ಪ್ಯಾಕೇಜ್ ಮಾಡಲಾಗಿದ್ದು, 30 ಟೆಂಡರ್‌ಗಳಿಗೂ ಪ್ರತ್ಯೇಕವಾಗಿ ಬಿಡ್ ಮಾಡಬೇಕಾಗುತ್ತದೆ. ಒಂದು ಪ್ಯಾಕೇಜ್‌ನಲ್ಲಿ 25ರಿಂದ 30 ಔಷಧಗಳು ಇರಲಿವೆ. ಜೂ. 28 ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಕೊನೆಯ ದಿನವಾಗಿತ್ತು. ಆದರೆ 20 ಔಷಧ ಕಂಪೆನಿಗಳು ಒಂದು ವಾರ ಟೆಂಡರ್ ಮುಂದೂಡುವಂತೆ ಮನವಿ ಸಲ್ಲಿಸಿದ್ದವು. ಇದನ್ನು ಪರಿಗಣಿಸಿ ಸರಕಾರದಿಂದ ಅನುಮತಿ ಪಡೆದು ಜು. 5ರ ವರೆಗೆ ಟೆಂಡರ್ ಮುಂದೂಡಲಾಗಿದೆ ಎಂದು ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್. ರಂಗಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ. ಪೂರೈಕೆಯಾಗದೆ ಸಂಕಷ್ಟ ಅಗತ್ಯ ಔಷಧಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರಕಾರದ ಪ್ರಧಾನ ಮುಖ್ಯ ಕಾರ್ಯದರ್ಶಿ ಗಳು ಇತ್ತೀಚೆಗೆ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ)ಗಳೊಂದಿಗೆ ಸಭೆ ನಡೆಸಿದ್ದಾರೆ. ಅಗತ್ಯ ಔಷಧಗಳನ್ನು ಸ್ಥಳೀಯವಾಗಿ ಖರೀದಿಸು ವಂತೆ ನಿರ್ದೇಶನ ಕೊಟ್ಟಿದ್ದಾರೆ. ಆದರೆ ಡಿಎಚ್‌ಒಗಳು ಸಮರ್ಪಕ ವಾಗಿ ಔಷಧ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಬಹಳಷ್ಟು ಕಂಪೆನಿಗಳು ಟೆಂಡರ್‌ಗೆ ಕಾಲಾವ ಕಾಶ ನೀಡುವಂತೆ ಕೇಳಿದ್ದು, ಆದರೂ ಕೆಲವು ಔಷಧಗಳ ಕೊರತೆ ಉಂಟಾಗಬಹುದು. ಒಂದು ವೇಳೆ ಟೆಂಡರ್ ಅಂತಿಮಗೊಳ್ಳದಿದ್ದರೆ ಮರು ಟೆಂಡರ್‌ಗೆ ಮತ್ತೆ 3 ತಿಂಗಳು ಬೇಕಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Related Articles
Advertisement