ಹೊಸದಿಲ್ಲಿ: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಸೇರಿದಂತೆ ಈ ವರೆಗೆ 115 ವ್ಯಕ್ತಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯಸಭೆಯ ಕಾರ್ಯದರ್ಶಿ ಕಚೇರಿ ತಿಳಿಸಿದೆ.
ನಾಮಪತ್ರ ಸಲ್ಲಿಸಿರುವವರಲ್ಲಿ ದ್ರೌಪದಿ ಮತ್ತು ಸಿನ್ಹಾ ಹೊರತುಪಡಿಸಿದಂತೆ ಮುಂಬಯಿಯ ಸ್ಲಂ ನಿವಾಸಿಯೊಬ್ಬರು, ಲಾಲು ಪ್ರಸಾದ್ ಯಾದವ್ ಎಂಬ ಮತ್ತೊಬ್ಬರು ಹಾಗೂ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಹಾಗೂ ದಿಲ್ಲಿಯ ಪ್ರಾಧ್ಯಾಪಕರೊಬ್ಬರು ಪ್ರಮುಖರು.
ಇದನ್ನೂ ಓದಿ:ಸರ್ಕಾರಿ ಪಿಯು ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಪಾವತಿಸುವ ಶುಲ್ಕಕ್ಕೆ ವಿನಾಯಿತಿ
ಜು. 18ರಂದು ನಡೆಯಲಿರುವ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಬುಧವಾರ ಕಡೆಯ ದಿನವಾಗಿತ್ತು.