Advertisement

115 ನೂತನ ಸೈನಿಕರ ಅಟ್ಟೆಸ್ಟೇಷನ್‌ ಪರೇಡ್‌

12:12 PM Oct 11, 2018 | Team Udayavani |

ಬೆಂಗಳೂರು: ನಗರದಲ್ಲಿರುವ ಭಾರತೀಯ ಸೇನೆಯ ಎಸಿಎಸ್‌ ತರಬೇತಿ ಕೇಂದ್ರ ಮತ್ತು ಕಾಲೇಜಿನಲ್ಲಿ ತರಬೇತಿ ಪಡೆದ 115 ಸೈನಿಕರನ್ನು ಅಟ್ಟೆಸ್ಟೇಷನ್‌ ಪರೇಡ್‌ ಮೂಲಕ ಸೈನಿಕ ಪ್ರಮಾಣ ವಚನ ಬೋಧನೆ ನೀಡಲಾಯಿತು.

Advertisement

ಸೈನ್ಯದ ಪುರಾತನ ಸಂಪ್ರದಾಯದಂತೆ ತರಬೇತಿ ಪಡೆದ ಎಲ್ಲರಿಗೂ ಸೈನ್ಯಕ್ಕೆ ಸೇರಿಕೊಳ್ಳುವ ಆರಂಭದಲ್ಲಿ ಪ್ರಮಾಣ ವಚನ ಬೋಧನೆ, ರಾಷ್ಟ್ರ ರಕ್ಷಣೆಯ ಸಂಕಲ್ಪ ನೀಡುವ ಜತೆಗೆ ಜಾತಿ, ಧರ್ಮ, ಪಂಥ, ಪಂಗಡದ ತಾರತಮ್ಯ ಇಲ್ಲದೇ ನಡೆದುಕೊಳ್ಳುವ ನೀತಿ ಪಾಠ ಕಲಿಸಲಾಗುತ್ತದೆ. ಅದರಂತೆ ಹೊಸದಾಗಿ ಸೇರ್ಪಡೆಗೊಂಡು ತರಬೇತಿ ಪಡೆದ 115 ಸೈನಿಕರಿಗೆ ಪ್ರಮಾಣವಚನ ಬೋಧನೆ ನಡೆಯಿತು. ಎಸಿಎಸ್‌ ತರಬೇತಿ ಕೇಂದ್ರದ ಡೆಪ್ಯೂಟಿ ಕಮಾಂಡೆಂಟ್‌ ಕೊಲನಲ್‌ ಬಿಜು ಪೌಲ್‌ ಅವರು ಪರೇಡ್‌ ಪರಿವೀಕ್ಷಣೆ ನಡೆಸಿದರು. ಯುವ ಸೈನಿಕರು ಹೇಗಿರಬೇಕು ಎಂಬ ಸಲಹೆ, ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next