Advertisement

114 ಯುದ್ಧ ವಿಮಾನ ಖರೀದಿಗೆ ನಿರ್ಧಾರ

02:00 AM Jul 05, 2019 | Team Udayavani |

ಹೊಸದಿಲ್ಲಿ: ಭಾರತೀಯ ರಕ್ಷಣಾ ಪಡೆಗಳನ್ನು ಆಧುನೀಕರಣಗೊಳಿಸಲು ಹಿಂದಿನ ಆಡಳಿತಾವಧಿಯಲ್ಲೇ ಹೆಜ್ಜೆಯಿಟ್ಟಿದ್ದ ಕೇಂದ್ರದ ಎನ್‌ಡಿಎ ಸರಕಾರವು ಈಗ ಅದನ್ನು ಸಾಕಾರಗೊಳಿಸಲು ಮುಂದಾಗಿದೆ.

Advertisement

ಮೊದಲ ಹಂತದಲ್ಲಿ ವಾಯುಪಡೆಗಾಗಿ 114 ಯುದ್ಧ ವಿಮಾನಗಳ ಖರೀದಿ ನಿಟ್ಟಿನಲ್ಲಿ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ವಿವಿಧ ಕಂಪೆನಿಗಳಿಂದ ಸಲ್ಲಿಕೆಯಾಗಿರುವ ಬಿಡ್‌ಗಳ ಮೌಲ್ಯೀಕರಣ ಆರಂಭಿಸಲಾಗಿದೆ.

ವಿಶ್ವದಲ್ಲೇ ಅತೀ ದೊಡ್ಡ ಮಟ್ಟದ ರಕ್ಷಣಾ ಸಾಮಗ್ರಿ ಖರೀದಿ ಎಂಬ ಹೆಗ್ಗಳಿಕೆ ಪಡೆದಿರುವ ಈ ವ್ಯಾಪಾರ ಒಪ್ಪಂದಕ್ಕಾಗಿ ಈಗಾಗಲೇ ಜಗತ್ತಿನ ದೈತ್ಯ ಸಂಸ್ಥೆಗಳಾದ ಬೋಯಿಂಗ್‌, ಲಾಕಿØೕಡ್‌ ಮಾರ್ಟಿನ್‌ ಕಾರ್ಪೊರೇಷನ್‌, ಸ್ವೀಡನ್‌ನ ಸಾಬ್‌ ಎ.ಬಿ. ಮುಂತಾದವು ಬಿಡ್‌ ಸಲ್ಲಿಸಿವೆ. ಬಿಡ್‌ ಪಡೆಯುವ ಕಂಪೆನಿಯು ಯುದ್ಧ ವಿಮಾನಗಳ ಶೇ. 85ರಷ್ಟು ತಯಾರಿಕೆಯನ್ನು ಭಾರತದಲ್ಲೇ ನಡೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next