Advertisement
ತುರ್ತು ಸಹಾಯವಾಣಿಗೆ ಮೊದಲ ದಿನವೇ ರಾಜ್ಯದ ವಿವಿಧ ಭಾಗಗಳಿಂದ ಅಂದಾಜು ಮಾಡಲು ಅಸಾಧ್ಯವಾಗದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಗಂಟೆಯಲ್ಲಿ 50,164 ಕರೆಗಳು ಬಂದಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಪ್ರಮಾಣವನ್ನು ದಿನಕ್ಕೆ ಅನ್ವಯಿಸಿದರೆ ಒಂದೇ ದಿನದಲ್ಲಿ 12 ಲಕ್ಷಕ್ಕೂ ಅಧಿಕ ಕರೆಗಳು ಸ್ವೀಕೃತಗೊಂಡಿವೆ. ಸಹಸ್ರಾರು ಕರೆಗಳಿಂದ ದೂರಸಂಪರ್ಕ ದಟ್ಟಣೆ ಉಂಟಾಗಿತ್ತು. ಈ ಹಿನ್ನೆಲೆ ಯಲ್ಲಿ ಬಿಎಸ್‌ಎನ್‌ಎಲ್ ಹೆಚ್ಚುವರಿ ದೂರ ಸಂಪರ್ಕ ಮಾರ್ಗಗಳ ವ್ಯವಸ್ಥೆಯನ್ನು ಕಲ್ಪಿಸಿತು.
ಪೊಲೀಸ್ ಸಹಾಯವಾಣಿ (100), ಅಗ್ನಿ ಶಾಮಕ ದಳ (101), ಆ್ಯಂಬು ಲೆನ್ಸ್ (108) ಹಾಗೂ ಇತರ ತುರ್ತು ಸೇವೆ ಗಳನ್ನು ಒಂದೇ ಸೂರಿನಡಿ ಒದಗಿ ಸುವ 112 ತುರ್ತು ಸ್ಪಂದನ ಸಹಾಯ ಕೇಂದ್ರ ಗುರುವಾರ ಲೋಕಾರ್ಪಣೆ ಗೊಂಡಿದ್ದು, “ಒಂದು ದೇಶ, ಒಂದೇ ತುರ್ತು ಕರೆ ಸಂಖ್ಯೆ’ ಪರಿಕಲ್ಪನೆಯಡಿ ಇದು ಅಭಿವೃದ್ಧಿಗೊಂಡಿದೆ.