Advertisement

ರಾಜಿ ಸಂಧಾನದಿಂದ 1119 ಪ್ರಕರಣ ಇತ್ಯರ್ಥ

03:05 PM Mar 15, 2022 | Team Udayavani |

ಹರಪನಹಳ್ಳಿ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿ ಕಾರದ ವತಿಯಿಂದ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1436 ಪ್ರಕರಣಗಳನ್ನು ಕೈಗೆತ್ತಿಕೊಂಡು 1119 ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಎಂ.ಭಾರತಿ, ಮತ್ತು ಫಕ್ಕಿರವ್ವ ಕೆಳಗೇರಿ ಅವರು ರಾಜಿ ಮೂಲಕ ಇತ್ಯರ್ಥಪಡಿಸಿದರು.

Advertisement

ಲೋಕ ಅದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್‌ ಬೌನ್ಸ್‌, ಬ್ಯಾಂಕ್‌ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ ಹಾಗೂ ಮೋಟಾರು ವಾಹನ, ನಿವೇಶನ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಒಟ್ಟು 791 ಪ್ರಕರಣಗಳ ಪೈಕಿ 610 ಪ್ರಕಣಗಳನ್ನು ಇತ್ಯರ್ಥಪಡಿಸಿ, 89,60,370 ರೂ.ಗಳು ಮತ್ತು ಬ್ಯಾಂಕ್‌ ದಾವ ಪೂರ್ವ ಪ್ರಕರಣಗಳಲ್ಲಿ 9.71 ಸಾವಿರ ರೂ. ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು.

ಕಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಒಟ್ಟು 664 ಪ್ರಕರಣಗಳ ಪೈಕಿ 509 ಪ್ರಕಣಗಳನ್ನು ಇತ್ಯರ್ಥಪಡಿಸಿ, ಒಟ್ಟು 15,30,866 ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥಪಡಿಸಿದರು. ಉಭಯ ನ್ಯಾಯಾಧೀಶರುಗಳು ಒಟ್ಟು 1119 ಪ್ರಕರಣಗಳು ಮತ್ತು 1,14,91,236 ರೂ. ಗಳ ಹಣದ ರೂಪದಲ್ಲಿ ರಾಜಿ  ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಕೆ.ಜಗದಪ್ಪ, ಕಾರ್ಯದರ್ಶಿ ಎಸ್‌.ಜಿ. ತಿಪ್ಪೇಸ್ವಾಮಿ, ಸರ್ಕಾರಿ ಅಭಿಯೋಜಕರುಗಳಾದ ಮೀನಾಕ್ಷಿ ಎನ್‌, ನಿರ್ಮಲ, ಹಿರಿಯ ವಕೀಲರಾದ ಗಂಗಾಧರ್‌ ಗುರುಮಟ್ , ಕೆ.ಚಂದ್ರಗೌಡ, ಕೆ.ಬಸವರಾಜ್‌, ಪಿ.ಜಗೇಶ್‌ ಗೌಡ್ರು, ಆರ್‌.ರಾಮನಗೌಡ, ಬಿ.ಹಾಲೇಶ್‌, ಎಸ್‌.ರುದ್ರಮನಿ, ಕೆ.ಪ್ರಕಾಶ್‌, ವೀರುಪಾಕ್ಷಪ್ಪ, ಬಿ.ಗೋಣಿಬಸಪ್ಪ ಬಂಡ್ರಿ, ಆನಂದ, ಮುತ್ತಿಗಿ ರೇವಣಸಿದ್ದಪ್ಪ, ಎಂ. ಮೃತ್ಯುಂಜಯ್ಯ, ಕೆ.ಎಸ್‌.ಮಂಜ್ಯಾನಾಯ್ಕ, ಜಿ. ಹಾಲೇಶ್‌, ಓ.ತಿರುಪತಿ, ಕೆ.ಕೊಟ್ರೇಶ್‌, ಕೆ.ನಾಗರಾಜ್‌, ನ್ಯಾಯಾಲಯದ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next