Advertisement

ಪತ್ನಿ ಕೂರಿಸಿಕೊಂಡು 1,100ಕಿ.ಮೀ. ಸೈಕಲ್‌ ತುಳಿದ!

10:06 AM Apr 25, 2020 | Sriram |

ಪತ್ನಿಯನ್ನು ಕುಳ್ಳಿರಿಸಿಕೊಂಡು ಸತತ 7 ದಿನ, 1,100 ಕಿ.ಮೀ. ಸೈಕಲ್‌ ತುಳಿದು ಊರು ಸೇರಿದ ವಲಸೆ ಕಾರ್ಮಿಕನ ಕರುಣಾಜನಕ ಕಥೆಯಿದು.

Advertisement

ದಿಗ್ಬಂಧನದ ನಡುವೆ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕನ ನೋವಿನ ಕಥೆ ಕೇಳಿದರೆ ಎಂತಹ ಕಲ್ಲು ಹೃದಯವೂ ಕರಗದೆ ಇರದು. ಅಶೋಕ್‌ ಬೆಹೆರಾ (36 ವರ್ಷ) ಹಾಗೂ ನಮಿತಾ ಹೊಟ್ಟೆಪಾಡಿಗಾಗಿ ಒಡಿಶಾದ ಗಂಜಾಮ್‌ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಚೆನ್ನೈಗೆ ಬಂದಿದ್ದರು, ಕೋವಿಡ್-19 ಹಿನ್ನೆಲೆಯಲ್ಲಿ ದೇಶದಲ್ಲಿ ಇದಕ್ಕಿದ್ದಂತೆ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಸಿಕ್ಕಿದ್ದ ಕೆಲಸವೂ ಕೈ ತಪ್ಪಿತು. ಇತ್ತ ಚೆನ್ನೈನಲ್ಲಿ ಉಳಿಯಲು ಆಗದೆ ಅತ್ತ ಊರಿಗೆ ತೆರಳಲೂ ಸಾಧ್ಯವಾಗದೆ ಕಣ್ಣೀರಿಟ್ಟರು, ಹೆತ್ತವರ ಬರುವಿಕೆಗಾಗಿ ಊರಲ್ಲಿ ಮತ್ತಿಬ್ಬರು ಪುಟ್ಟ ಕಂದಮ್ಮಗಳು ಕಾಯುತ್ತಿದ್ದವು. ಹೆತ್ತೂಡಲು ಸುಮ್ಮನಿರುವುದೇ? ಖಂಡಿಲ್ಲ ಇಲ್ಲ, ಹೇಗಾದರೂ ಮಾಡಿ ಊರು ಸೇರುವುದು ನಿಶ್ಚಿತ ಎಂದು ದಂಪತಿಗಳು ದೃಢ ಸಂಕಲ್ಪ ಮಾಡಿದರು. ಇದಕ್ಕೆ ಈ ದಂಪತಿಗಳು ಆಯ್ದುಕೊಂಡದ್ದೇ ಸೈಕಲ್‌ ಸವಾರಿ. ಸತತ 7 ದಿನ, 1,100 ಕಿ.ಮೀ. ಸೈಕಲ್‌ ಹಿಂದೆ ಪತ್ನಿ ಕುಳ್ಳಿರಿಸಿ ಹಲವಾರು ಸವಾಲುಗಳನ್ನು ಎದುರಿಸಿ ಊರಿಗೆ ತಲುಪಿದ ಸಾಹಸಿಯ ಕಥೆ ರೋಮಾಂಚನಗೊಳಿಸುತ್ತದೆ. ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಆತನ ಸಾಹಸದ ಕಥೆ ವೈರಲ್‌ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next