Advertisement
ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಸೋಮವಾರ ಕಚೇರಿಗೆ ಶಾಸಕರು ಬರಲಿದ್ದಾರೆ ಎಂದು ಸಂಜೆವರೆಗೂ ಕಾದು ಕುಳಿತಿದ್ದರು. ಈ ವೇಳೆ ಅಜ್ಜಿ ಸುಬ್ಬಮ್ಮ ಅವರೊಂದಿಗೆ ಸುದ್ದಿಗಾರರು ಮಾತನಾಡಿಸಿದಾಗ, ಕೋಳೂರು ಗ್ರಾಮದ ಸರ್ವೆ ನಂ 173 ರಲ್ಲಿ ತಾನು 40 ವರ್ಷದಿಂದ ಕಾಫಿ, ಅಡಿಕೆ ಬೆಳೆದುಕೊಂಡಿದೇನೆ. 1989ರಲ್ಲಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದೆ. ಆರ್ಜಿ ಇದೂವರೆಗೂ ಇತ್ಯರ್ಥವಾಗಿಲ್ಲ. ಇತ್ತೀಚೆಗೆ ಕಂದಾಯ ಅಧಿ ಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸರ್ವೆ ಕೂಡ ನಡೆದಿದೆ. ಆದರೆ ಮಂಜೂರಾತಿಗಾಗಿ ಕಾಯುತ್ತಿದ್ದರೂ ಇನ್ನೂ ಮಾಡಿಕೊಟ್ಟಿಲ್ಲ. ಇಂದು ಫಾ.ನಂ 53 ಸಭೆ ಇದೆ. ಶಾಸಕರು ಬರುತ್ತಾರೆ ಎಂದು ವಿಷಯ ತಿಳಿಯಿತು. ಹಾಗಾಗಿ ತಾನು ಬಂದು ಶಾಸಕರಿಗಾಗಿ ಕಾಯುತ್ತಿರುವುದಾಗಿ ತಿಳಿಸಿದರು.
ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಅಜ್ಜಿಯನ್ನು ಸಮಾಧಾನಪಡಿಸಿ ಕಳುಹಿಸಿದರು. ಚುನಾವಣೆ ಘೋಷಣೆಯಾಗುವ ಮುನ್ನವೇ ಅಜ್ಜಿಯ ಜಮೀನನ್ನು ಮಂಜೂರಾತಿ ಮಾಡಿಕೊಡುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.