Advertisement

ದ.ಕ. ಜಿಲ್ಲೆಯ 6,600 ಜನರಿಗೆ ಬೆಳಕು: ಸುಳ್ಯದಲ್ಲಿ 110 ಕೆ.ವಿ. ಸಬ್‌ಸ್ಟೇಷನ್‌ಗೆ ಶಂಕುಸ್ಥಾಪನೆ

12:35 AM Jan 11, 2023 | Team Udayavani |

ಸುಳ್ಯ: ಬೆಳಕು ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 6,600 ಜನರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸಬ್‌ಸ್ಟೇಷನ್‌ ನಿರ್ಮಿಸಿದ್ದೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

Advertisement

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ವತಿಯಿಂದ 110/33/11 ಕೆ.ವಿ. ವಿದ್ಯುತ್‌ ಉಪಕೇಂದ್ರ ಸುಳ್ಯ ಮತ್ತು 110 ಕೆ.ವಿ. ಮಾಡಾವು-ಸುಳ್ಯ ವಿದ್ಯುತ್‌ ಪ್ರಸರಣ ಮಾರ್ಗದ ಕಾಮಗಾರಿಗೆ ಸುಳ್ಯದ ಅಂಬಟಡ್ಕ 33/11 ಕೆ.ವಿ. ಉಪ ಕೇಂದ್ರದ ಬಳಿ ಮಂಗಳವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತ ನಾಡಿ ದರು. ಒಂದು ವಾರದಲ್ಲಿ ಕಾಮ ಗಾರಿ ಆರಂಭಿಸಿ ಒಂದು ವರ್ಷದಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದರು.

ಜಿಲ್ಲೆಗೆ 11 ಸಬ್‌ಸ್ಟೇಷನ್‌
ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ 110 ಕೆ.ವಿ. ಸಾಮರ್ಥ್ಯದ 11 ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡುವ ಕಾರ್ಯವಾಗಿದೆ. ಜಿಲ್ಲೆಗೆ ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ವಿದ್ಯುತ್‌ ಉಪಕೇಂದ್ರಗಳಿಗೆ ಮಂಜೂರಾತಿ ನೀಡಲಾಗುವುದು. ಸುಳ್ಯದ ಸಂಪಾಜೆಯಲ್ಲಿ 33 ಕೆವಿ ಸಬ್‌ಸ್ಟೇಷನ್‌ಗೆ ಜಮೀನು ಗುರುತಿಸಲಾಗಿದೆ. ಚಾರ್ವಾಕದಲ್ಲಿ 33 ಕೆವಿ ಸಬ್‌ಸ್ಟೇಷನ್‌ಗೆ ಕಂದಾಯ ಇಲಾಖೆ ಜಾಗ ಗುರುತಿಸಬೇಕಿದೆ. ಪಂಜದ ನಿಂತಿಕಲ್ಲು, ಜಾಲೂÕರು ಸೇರಿದಂತೆ ಸುಳ್ಯ ವ್ಯಾಪ್ತಿಯ ಇನ್ನೂ 4 ಕಡೆ ಸಬ್‌ಸ್ಟೇಷನ್‌ಗಳು ನಿರ್ಮಾಣವಾಗಲಿವೆ ಎಂದರು.

ಸತತ ಪ್ರಯತ್ನ
ಸುಳ್ಯಕ್ಕೆ 110 ಕೆ.ವಿ. ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಸತತ ಪ್ರಯತ್ನ ನಡೆದಿದೆ. ಅರಣ್ಯ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ. 46 ಕೋಟಿ ರೂ. ಅನುದಾನ ನೀಡಲಾಗಿದೆ. ಇಲ್ಲಿಂದ 21 ಕಿ.ಮೀ. ಅರಣ್ಯ ಇಲಾಖೆ ಜಾಗದಲ್ಲಿ ಲೈನ್‌ ಎಳೆಯಲು ಕೆಪಿಟಿಸಿಎಲ್‌ ವತಿಯಿಂದ 9 ಕೋಟಿ ರೂ. ಪರಿಹಾರ ಅರಣ್ಯ ಇಲಾಖೆಗೆ ನೀಡಲಾಗಿದೆ ಎಂದರು.

ಅಭಿವೃದ್ಧಿಯಲ್ಲಿ ಗೊಂದಲ ಬೇಡ
ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಮಾತ ನಾಡಿ, ಈ ಹಿಂದೆ ಜಿಲ್ಲೆಯವರೇ ಅರಣ್ಯ ಸಚಿವ ರಾಗಿದ್ದ ವೇಳೆ ಸುಳ್ಯದ ಸಮಸ್ಯೆ ಯನ್ನು ಪರಿಹರಿಸುವ ಬದಲು ಟೀಕೆ ಮಾಡಿದರು. ಕ್ಷೇತ್ರದ ಅಭಿವೃದ್ಧಿ ಬೇಡಿಕೆ ಬಗ್ಗೆ ಸ್ಪಷ್ಟ ಮಾಹಿತಿ ನನ್ನಲ್ಲಿದೆ. ಅಭಿವೃದ್ಧಿ ಯಲ್ಲಿ ಯಾವುದೇ ಗೊಂದಲ ಬೇಡ ಎಂದರು.
ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ಮುಖ್ಯ ಎಂಜಿನಿಯರ್‌ ಪುಷ್ಪಾ ಮೊದಲಾದವ ರಿದ್ದರು. ಕೆಪಿಟಿಸಿಎಲ್‌ ಎಂಜಿನಿಯರ್‌ ರವಿಕಾಂತ್‌ ಆರ್‌. ಕಾಮತ್‌ ಸ್ವಾಗತಿಸಿ, ಗಂಗಾಧರ ಕೆ. ವಂದಿಸಿದರು. ರಾಕೇಶ್‌ ರೈ ಕೆಡೆಂಜಿ ನಿರ್ವಹಿಸಿದರು.

Advertisement

ಹೈಡ್ರೋಜನ್‌ ಮೂಲಕ ವಿದ್ಯುತ್‌
ದಕ್ಷಿಣ ಕನ್ನಡದಲ್ಲಿ ಹಸಿರು ಇಂಧನ ಉತ್ಪಾದನೆ ನಿಟ್ಟಿನಲ್ಲಿ ಜಲಜನಕ (ಹೈಡ್ರೋಜನ್‌) ಮೂಲಕ ವಿದ್ಯುತ್‌ ಉತ್ಪಾದಿಸುವ ಚಿಂತನೆ ಇದ್ದು, ಇತ್ತೀಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಹಲವು ಕಂಪೆನಿಗಳು ಮುಂದೆ ಬಂದಿವೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಸುನಿಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next