Advertisement
ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರಗಿದ ಸುಳ್ಯ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
Related Articles
ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ಮಾತನಾಡಿ, ಪೆರ್ನಾಜೆಯಿಂದ ಸಂಪಾಜೆ ವರೆಗಿನ ಹೆದ್ದಾರಿ ಸೂಕ್ತ ಚರಂಡಿಯಿಲ್ಲದೇ ರಸ್ತೆಯಲ್ಲಿ ಮಳೆ ನೀರು ಹರಿಯುವ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಪ್ರತಿಕ್ರಿಯಿ ಸಿದ ಶಾಸಕರು ರಸ್ತೆ ಬದಿಯ ಮನೆಗಳವರು ಮೋರಿ ನಿರ್ಮಿಸದೇ ಮನೆಗೆ ತೆರಳುವ ರಸ್ತೆ ನಿರ್ಮಿಸಿರುವುದರಿಂದ ಹೀಗಾಗುತ್ತಿದೆ. ಈ ಕುರಿತು ಪಿಡಬ್ಲ್ಯುಡಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕಾಗಿದ್ದು ಕೆಆರ್‌ಡಿಸಿಎಲ್ ಮತ್ತು ಪಿಡಬ್ಲ್ಯುಡಿ ಇಲಾಖಾಧಿಕಾರಿಗಳಿಗೆ ಪತ್ರ ಬರೆಯಲು ಸೂಚಿಸಿದರು.
Advertisement
ಮಂಡೆಕೋಲು ಗ್ರಾ.ಪಂ.ನಲ್ಲಿ ಸಾರ್ವ ಜನಿಕ ಉದ್ದೇಶ ಕ್ಕಾಗಿ ಕಾಯ್ದಿರಿಸಿದ 2.30 ಎಕ್ರೆ ಜಮೀನಿನಲ್ಲಿ ಖಾಸಾಗಿ ಒತ್ತುವರಿಯಾಗಿದ್ದು ತೆರವಿಗೆ ಸರ್ವೇ ನಡೆಸುವಂತೆ ದೇರಣ್ಣ ಗೌಡ ಅಡ್ಡಂತಡ್ಕ ಸಭೆಯಲ್ಲಿ ಆಗ್ರಹಿಸಿದರು.
ಮರ್ಕಂಜ ಗ್ರಾ.ಪಂ. ಮೀಸಲಿರಿಸಿದ ಶ್ಮಶಾನ, ನಿವೇಶ ನವನ್ನು ಖಾಸಾಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ ಎಂದು ಪಂ. ಅಧ್ಯಕ್ಷರು ಪ್ರಸ್ತಾಪಿಸಿದಾಗ ಶಾಸಕರು ಅರಣ್ಯ ಇಲಾಖೆ ತನ್ನದೆಂದು ವಾದಿಸುವ ಇಲಾಖೆಯ ಜಾಗವನ್ನು ಸರ್ವೆ ನಡೆಸಲು ಆದೇಶಿಸಿದರು.
ಇದೇ ಗ್ರಾಮದ ಪನ್ನೇ ಎಂಬಲ್ಲಿ ಎಸ್‌ಸಿ ಕಾಲನಿ ಜನತೆಗೆ ತಮ್ಮ ಜಾಗದ ದಾಖಲೆ ಮಾಡಿಕೊಳ್ಳಲು ಆರ್ಥಿಕ ಅಡಚಣೆಯಿರುವುದರಿಂದ ಪಂಚಾಯತ್ ಅನುದಾನದಲ್ಲಿ ಪಹಣಿ ಪತ್ರ ಮಾಡಿಸಿಕೊಳ್ಳಲು ಮುಂದಾಗುವಂತೆ ಶಾಸಕರು ಸೂಚಿಸಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ತಹಶೀಲ್ದಾರ್ ಎಂ.ಎಂ.ಗಣೇಶ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ನ.ಪಂ. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಮತ್ತಿತರರಿದ್ದರು. ಈ ಸಂದರ್ಭ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶಾಸಕ ಅಂಗಾರ ವಿತರಿಸಿದರು.
ಕಾಟಾಚಾರಕ್ಕೆ ನಡೆದ ಜನಸಂಪರ್ಕ ಸಭೆ : ಶಾಸಕರಿಂದ ಎಚ್ಚರಿಕೆಜನರ ಸಮಸ್ಯೆ, ಅಹವಾಲುಗಳನ್ನು ಸ್ಥಳದಲ್ಲೇ ಪರಿಹಾರ ಕಾಣಿಸುವುದರೊಂದಿಗೆ ಸರಕಾರದ ಯೋಜನೆಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಬೇಕು ಎಂದು ಹೋಬಳಿ ಮಟ್ಟದ ಸಭೆ ಆಯೋಜಿಸಲಾಗುತ್ತಿದೆ. ಆದರೆ ಶನಿವಾರದ ಸಭೆಯನ್ನು ಲೆಕ್ಕಭರ್ತಿಗಷ್ಟೇ ಆಯೋಜಿಸಲಾಗಿತ್ತು. ಕೆಲವು ಮಂದಿ ಫಲಾನುಭವಿಗಳು, ಜನಪ್ರತಿನಿಧಿಗಳು ಮತ್ತು ಕೆಲವು ಅಧಿಕಾರಿಗಳಷ್ಟೇ ಸಭೆಯಲ್ಲಿದ್ದರು. ಪೂರ್ವಸಿದ್ಧತೆಯೊಂದಿಗೆ ಸಭೆ ನಡೆಯಬೇಕಿತ್ತಾದರೂ ಉದ್ದೇಶಪೂರ್ವಕವಾಗಿ ಪ್ರಚಾರ ನೀಡದೆ ಗೌಪ್ಯವಾಗಿಟ್ಟು ಆಯೋಜಿಸಿದಂತಿತ್ತು. ಸಭೆ ಬಗ್ಗೆ ಮಾಧ್ಯಮಗಳಿಗೂ ಮಾಹಿತಿ ನೀಡಿರಲಿಲ್ಲ. ಈ ಕುರಿತು ಮಾಧ್ಯಮ ಮಂದಿ ಮಾಹಿತಿ ಬಯಸಿದಾಗ ನಿಮಗೆ ಮುಂಚಿತವಾಗಿ ತಿಳಿಸಿದ್ದೇವೆ ಎಂದು ನಿಮ್ಮ ಸಹಿ ಕೂಡ ಪತ್ರದಲ್ಲಿದೆ ಮಾಧ್ಯಮದವರನ್ನೇ ಯಾಮಾರಿಸುವ ಘಟನೆಯೂ ನಡೆಯಿತು. ಇದೇ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ ಶಾಸಕ ಅಂಗಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜನತೆಯ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಸರಕಾರ ವಿವಿಧ ಇಲಾಖೆಗಳ ಜನಸಂಪರ್ಕ ಸಭೆಯನ್ನು ನಡೆಸುತ್ತಿದೆ. ಕೇವಲ ಕಾಟಾಚಾರಕ್ಕಾಗಿ ಆಯೋಜಿಸಬೇಡಿ. ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಮತ್ತು ಎಲ್ಲ ಇಲಾಖಾಧಿಕಾರಿಗಳು ಪಾಲ್ಗೊಳ್ಳಬೇಕು. ಮುಂದೆ ಇದೇ ರೀತಿ ಜರಗಿದರೆ ಸಚಿವರು ಮತ್ತು ಸರಕಾರದ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದರು.