ಭಾರತೀನಗರ: ಮದ್ದೂರು ಪಟ್ಟಣದ ಎಲ್ಲಾ ಬಡಾವಣೆಗಳಿಗೆ 110ಕೋಟಿ ರೂ. ವೆಚ್ಚದಲ್ಲಿ ದಿನದ 24 ಗಂಟೆ ಶುದ್ಧ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈಗಾಗಲೇಟೆಂಡರ್ ಪ್ರಕ್ರಿಯೆ ಮುಗಿದಿದ್ದು ಅ.8 ರೊಳಗೆ ಶಂಕುಸ್ಥಾಪನೆ ನೆರವೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ತಮ್ಮ ನಿವಾಸದಲ್ಲಿ ಮಾತನಾಡಿ, ಅ.10ರ ನಂತರ ಗ್ರಾಪಂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗಿ ಇದ್ದರೂ 3 ತಿಂಗಳು ಅಂದರೆ ಫೆಬ್ರವರಿವರೆಗೆ ಯಾವುದೇ ಕಾಮಗಾರಿಗೆ ಚಾಲನೆ ನೀಡಲು ಸಾಧ್ಯವಾಗಲ್ಲ. ಈ ಹೀಗಾಗಿ ಅ.8 Ã ರೊಳಗೆ ಭೂಮಿಪೂಜೆ ನೆರವೇರಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಅವಧಿಯಲ್ಲಿ ಮದ್ದೂರು ಪಟ್ಟಣದ ಒಳಚರಂಡಿ ವ್ಯವಸ್ಥೆ ಸರಿಪಡಿಸಲು 50 ಕೋಟಿ ರೂ. ಮಂಜೂರಾಗಿತ್ತು. ಅಲ್ಲದೆ, ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ 2004ರಲ್ಲಿ ಶಿಂಷಾ, ಕಾವೇರಿ ನದಿಯಿಂದ ಮದ್ದೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಯಂತ್ರ ಅಳವಡಿಸಲಾಗಿತ್ತು. ಪ್ರಸ್ತುತ ಅವು ಹಳೆಯದಾಗಿರುವುದರಿಂದ ಅವುಗಳನ್ನು ಬದಲಾಯಿಸಲಾಗುವುದು ಎಂದರು.
ಮದ್ದೂರು-ಭಾರತೀನಗರ ನಡುವೆ ಇರುವ ಪಂಪ್ ವ್ಯವಸ್ಥೆ ಸರಿಪಡಿಸುವುದು, ಮದ್ದೂರಿನ ಬಡಾವಣೆಗಳಿಗೆ ಆಧುನಿಕವಾಗಿ ಕುಡಿವ ನೀರಿನ ಹೊಸ ಪೈಪ್ ಅಳವಡಿಸಿ, ಮೀಟರ್ ಅಳವಡಿಸಲು 60 ಕೋಟಿ ರೂ. ಮಂಜೂರಾಗಿತ್ತು. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.
ಅಧಿಕಾರಿಗಳಿಗೆ ಸೂಚಿಸಿರುವೆ: ಶಾಸಕ : ಅಕ್ಟೋಬರ್ ಮಧ್ಯಭಾಗದಲ್ಲಿ ಗ್ರಾಪಂ ಚುನಾವಣೆ ನಡೆಯುವುದರಿಂದ ತಕ್ಷಣ ಮುಂದಿನ ಅ.8ರೊಳಗೆಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಕಾಮಗಾರಿ ಚಾಲನೆಗೆ ಸರಳ ಸಮಾರಂಭ ಮಾಡಿ ಜಿಲ್ಲಾ ಉಸ್ತುವಾರಿ ಮಂತ್ರಿ, ನಗಾರಾಭಿವೃದ್ಧಿ ಸಚಿವರು, ಸಂಸದರು, ಸಂಬಂಧಪಟ್ಟ ಇಲಾಖಾ ಮಂತ್ರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಒಂದು ವೇಳೆ ಬರಲು ಸಾಧ್ಯವಾಗದಿದ್ದರೆ ಮುಂದಿನ ಒಂದು ದಿನ ನಾಮಫಲಕ ಅಳವಡಿಸಿ ಉದ್ಘಾಟನೆಕೈಗೊಳ್ಳಿ ಎಂದು
ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.