Advertisement

11ರ ವಿದ್ಯಾರ್ಥಿನಿಗೆ ಹುಡುಗರ ಶೌಚಾಲಯದಲ್ಲಿ ನಿಲ್ಲುವ ಶಿಕ್ಷೆ

03:44 PM Sep 11, 2017 | udayavani editorial |

ಹೈದರಾಬಾದ್‌ : ತರಗತಿಗೆ ಶಾಲಾ ಸಮವಸ್ತ್ರ ಧರಿಸಿ ಬಂದಿಲ್ಲ ಎಂಬ ಕಾರಣಕ್ಕೆ 11 ವರ್ಷ ಪ್ರಾಯದ ವಿದ್ಯಾರ್ಥಿನಿಗೆ ಇಲ್ಲಿನ ಖಾಸಗಿ  ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕನು ಹುಡುಗರ ಶೌಚಾಲಯದಲ್ಲಿ ನಿಂತುಕೊಂಡಿರುವ ಅಮಾನವೀಯ ಶಿಕ್ಷೆ ನೀಡಿರುವುದು ವರದಿಯಾಗಿದೆ.

Advertisement

ಆಂಧ್ರ ಪ್ರದೇಶದ ಮಕ್ಕಳ ಹಕ್ಕು ಸಂಘಟನೆಯು ಈ ಘಟನೆ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಪೊಲೀಸರಿಗೆ ದೂರು ನೀಡಿರುವುದನ್ನು ಅನುಸರಿಸಿ ತೆಲಂಗಾಣ ಸರಕಾರ ಇಂದು ಸೋಮವಾರ ತನಿಖೆಗೆ ಆದೇಶ ನೀಡಿದೆ. 

ಮಕ್ಕಳ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಪಿ ಅಚ್ಯುತ ರಾವ್‌ ಅವರು “ಅಮಾಯಕ ವಿದ್ಯಾರ್ಥಿನಿಗೆ ಅಮಾನವೀಯ ಶಿಕ್ಷೆ ನೀಡಿರುವ ಸಂವೇದನೆಯೇ ಇಲ್ಲದ ಶಿಕ್ಷಕ ಸಿಬಂದಿ ಮತ್ತು ಶಾಲಾ ಆಡಳಿತೆಯ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಸರಕಾರವನು ಒತ್ತಾಯಿಸಿದ್ದಾರೆ. 

“ನನ್ನ ಮಗಳು ಬಿಎಚ್‌ಇಎಲ್‌ ಆವರಣದೊಳಗಿರುವ ನಗರ ಹೊರವಲಯದ ರಾಮಚಂದ್ರಾಪುರಂನಲ್ಲಿನ ಹೈಸ್ಕೂಲಿನಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮೊನ್ನೆ ಶನಿವಾರ ಅವಳು ಕಾರಣಾಂತರದಿಂದ ಸಮವಸ್ತ್ರ ಧರಿಸದೇ ಶಾಲೆಗೆ ಹೋಗಿದ್ದಳು.ಆದರೆ ಅದೇ ಕಾರಣಕ್ಕೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆಕೆಯನ್ನು ಹುಡುಗರ ಶೌಚಾಲಯದಲ್ಲಿ ಬಲವಂತವಾಗಿ ನಿಂತಿರುವ ಅಮಾನವೀಯ ಶಿಕ್ಷೆ ನೀಡಿದ’ ಎಂದು ಹುಡುಗಿಯ ತಂದೆ ಎ ರಾಮಕೃಷ್ಣ ಎಂಬವರು ದೂರು ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next