Advertisement

ಗುಜರಾತ್‌ : 9ನೇ ತರಗತಿ ವಿದ್ಯಾರ್ಥಿಯಿಂದ 11ರ ಬಾಲಕಿಯ ಮೇಲೆ ರೇಪ್‌

11:02 AM Dec 14, 2018 | Team Udayavani |

ಪಾಲನಪುರ : ಹನ್ನೊಂದು ವರ್ಷ ಪ್ರಾಯದ ಹುಡುಗಿಯನ್ನು 9ನೇ ತರಗತಿಯ ವಿದ್ಯಾರ್ಥಿಯಾಗಿರುವ ನೆರೆಮನೆ ಹುಡುಗ ಅತ್ಯಾಚಾರ ಗೈದಿರುವ ಘಟನೆ ಗುಜರಾತ್‌ನ ದಾಂತಾ ತೆಹಶೀಲ್‌ನ ಗ್ರಾಮವೊಂದರಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಹುಡುಗಿಯನ್ನು ಉಪಾಯದಿಂದ ಮನೆ ಸಮೀಪದ ಹೊಲಕ್ಕೆ ಕರೆದೊಯ್ದ ಹುಡುಗ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನ ಅಪ್ರಾಪ್ತ ವಯಸ್ಸಿನವನಾಗಿರುವುದರಿಂದ ಆತನನ್ನು ಬಂಧಿಸಿಲ್ಲ; ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಬಿ ಕೆ ಗೋಸ್ವಾಮಿ ತಿಳಿಸಿದ್ದಾರೆ.

ತನ್ನ ಮೇಲಾದ ಅತ್ಯಾಚಾರವನ್ನು ಹುಡುಗಿಯ ಮನೆಯವರಿಗೆ ತಿಳಿಸಿದ ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದರು. ಆ ಪ್ರಕಾರ ಹುಡುಗನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಐಪಿಸಿ ಸೆ.376 ಮತ್ತು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಗೋಸ್ವಾಮಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next