Advertisement

ಚಂಡಮಾರುತದಿಂದ ಭೂಕುಸಿತ: 20 ತಾಸುಗಳ ಕಾಲ ಫ್ರಿಡ್ಜ್ ನಲ್ಲಿ ಕುಳಿತು ಬದುಕಿದ ಬಾಲಕ

10:47 AM Apr 22, 2022 | Team Udayavani |

ಮನಿಲ: ಚಂಡಮಾರುತದಿಂದಾಗಿ ಭೂಕುಸಿತ ಉಂಟಾಗಿ, ಪೂರ್ತಿ ಮನೆಯೇ ನೆಲಸಮವಾದರೂ ಮನೆಯಲ್ಲಿದ್ದ ಆ ಒಬ್ಬ ಬಾಲಕ ಮಾತ್ರ ಬದುಕುಳಿದಿದ್ದಾನೆ.

Advertisement

ಹೌದು! ಫಿಲಿಪ್ಪೀನ್ಸ್‌ನ  ಬೇಬೇ ನಗರದಲ್ಲಿ ಇತ್ತೀಚೆಗೆ ಚಂಡಮಾರುತದಿಂದ ಭೂಕುಸಿತ ಉಂಟಾಗಿ,  200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.  ಈ ಪೈಕಿ  ಸಿ.ಜೆ.ಜಸ್ಮೆ ಹೆಸರಿನ 11 ವರ್ಷದ ಬಾಲಕ ಭೂ ಕುಸಿತದ ಸುಳಿವು ಸಿಗುತ್ತಿದ್ದಂತೆಯೇ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕುಳಿತಿದ್ದಾನೆ. ಮನೆ ಪೂರ್ತಿ ನೆಲಸಮವಾಗಿದ್ದು, ಅಲ್ಲಿದ್ದ ಫ್ರಿಡ್ಜ್ ಕೂಡ ದೂರದಲ್ಲಿ ಹೋಗಿ ಬಿದ್ದಿದೆ. ರಕ್ಷಣಾ ತಂಡ ಬಂದು, ಎಲ್ಲೆಡೆ ಹುಡುಕಿದಾಗ ಫ್ರಿಡ್ಜ್ ಸಿಕ್ಕಿದ್ದು, ಅದರಲ್ಲಿ ಜಸ್ಮೆ ಜೀವಂತವಾಗಿ ಸಿಕ್ಕಿದ್ದಾನೆ.

ಸುಮಾರು 20 ತಾಸುಗಳ ಕಾಲ ಆತ ಫ್ರಿಡ್ಜ್ ನಲ್ಲೇ ಇದ್ದಿದ್ದು, ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದ ಎಂದು ರಕ್ಷಣಾ ತಂಡ ತಿಳಿಸಿದೆ. ಅದೇ ಮನೆಯಲ್ಲಿದ್ದ ಆತನ ಸಹೋದರಿ ಮತ್ತು ತಾಯಿ ಕಾಣೆಯಾಗಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next