ವರ್ಷ: 1975
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ವೆಸ್ಟ್ ಇಂಡೀಸ್
ಪಂದ್ಯಶ್ರೇಷ್ಠ: ಕ್ಲೈವ್ ಲಾಯ್ಡ
8 ತಂಡಗಳ ಈ ಆರಂಭಿಕ ಸ್ಪರ್ಧೆಯಲ್ಲಿ ಯಾವ ಬಲಾಬಲವೂ ಸ್ಪಷ್ಟವಾಗಿ ಅರಿವಿರಲಿಲ್ಲ. ಆದರೆ ಆಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ದೈತ್ಯರೆನಿಸಿದ್ದ ಕೆರಿಬಿಯನ್ನರು ಏಕದಿನದಲ್ಲೂ ಪ್ರಾಬಲ್ಯ ಮೆರೆದರು. ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಕೆಡವಿ ಚಾಂಪಿಯನ್ ಎನಿಸಿದರು.
Advertisement
* ವಿಶ್ವಕಪ್-2ವರ್ಷ: 1979
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ವೆಸ್ಟ್ ಇಂಡೀಸ್
ಪಂದ್ಯಶ್ರೇಷ್ಠ: ವಿವಿಯನ್ ರಿಚರ್ಡ್ಸ್
ಮತ್ತೆ ಇಂಗ್ಲೆಂಡ್‌ನಲ್ಲಿ ನಡೆದ ಈ ಕೂಟದಲ್ಲಿ ವೆಸ್ಟ್ ಇಂಡೀಸ್ ತನ್ನ ಪರಾಕ್ರಮ ಮೆರೆಯಿತು. ಅಜೇಯ ಅಭಿಯಾನಗೈದು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಫೈನಲ್‌ನಲ್ಲಿ ನಾಟಕೀಯ ಕುಸಿತ ಅನುಭವಿಸಿದ ಆತಿಥೇಯ ಇಂಗ್ಲೆಡ್ 92 ರನ್ನುಗಳಿಂದ ಶರಣಾಯಿತು.
ವರ್ಷ: 1983
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ಭಾರತ
ಪಂದ್ಯಶ್ರೇಷ್ಠ: ಮೊಹಿಂದರ್ ಅಮರನಾಥ್
ಜಾಗತಿಕ ಕ್ರಿಕೆಟ್‌ನಲ್ಲಿ ಪವಾಡವೊಂದಕ್ಕೆ ಸಾಕ್ಷಿಯಾದ ವಿಶ್ವಕಪ್ ಪಂದ್ಯಾವಳಿ ಇದಾಗಿದೆ. ಹ್ಯಾಟ್ರಿಕ್ ಹಾದಿಯಲ್ಲಿದ್ದ ವೆಸ್ಟ್ ಇಂಡೀಸ್ ಸೊಕ್ಕು ಮುರಿಯುವ ಮೂಲಕ ಕಪಿಲ್‌ದೇವ್ ಸಾರಥ್ಯದ ಭಾರತ ಹೊಸ ಇತಿಹಾಸ ಬರೆಯಿತು. ಲಾರ್ಡ್ಸ್‌ನಲ್ಲಿ ವಿಂಡೀಸನ್ನು 43 ರನ್ನುಗಳಿಂದ ಬಗ್ಗುಬಡಿಯಿತು. * ವಿಶ್ವಕಪ್-4
ವರ್ಷ: 1987
ಆತಿಥ್ಯ: ಭಾರತ, ಪಾಕಿಸ್ಥಾನ
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಡೇವಿಡ್ ಬೂನ್
ವಿಶ್ವಕಪ್ ಆತಿಥ್ಯದಿಂದ ಇಂಗ್ಲೆಂಡ್ ದೂರಾಯಿತು. ರಿಲಯನ್ಸ್ ಪ್ರಾಯೋಜಕತ್ವದಲ್ಲಿ ಭಾರತ-ಪಾಕಿಸ್ಥಾನ ಜಂಟಿಯಾಗಿ 4ನೇ ಕೂಟವನ್ನು ಸಂಘಟಿಸಿದವು. ಕೋಲ್ಕತಾ ಫೈನಲ್‌ನಲ್ಲಿ ಇಂಗ್ಲೆಂಡನ್ನು ಕೇವಲ 7 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯ ಮೊದಲ ಸಲ ಕಪ್ ಎತ್ತಿ ಸಂಭ್ರಮಿಸಿತು.
Related Articles
ವರ್ಷ: 1992
ಆತಿಥ್ಯ: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್
ಚಾಂಪಿಯನ್: ಪಾಕಿಸ್ಥಾನ
ಪಂದ್ಯಶ್ರೇಷ್ಠ: ವಾಸಿಮ್ ಅಕ್ರಮ್
ರೌಂಡ್ ರಾಬಿನ್ ಲೀಗ್ ಮಾದರಿಯ ಈ ಪಂದ್ಯಾವಳಿ ಕಲರ್‌ಫುಲ್ ಆಗಿ ಮೂಡಿಬಂತು. ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಆತಿಥ್ಯದ ಈ ಕೂಟ ಅನೇಕ ವೈಶಿಷ್ಟéಗಳಿಗೆ ಸಾಕ್ಷಿಯಾಯಿತು. ಇಂಗ್ಲೆಂಡನ್ನು 22 ರನ್ನುಗಳಿಂದ ಮಣಿಸಿದ ಪಾಕಿಸ್ಥಾನ ವಿಶ್ವ ಕ್ರಿಕೆಟಿನ ನೂತನ ಚಾಂಪಿಯನ್ ಎನಿಸಿತು.
Advertisement
ವಿಶ್ವಕಪ್-6ವರ್ಷ: 1996
ಆತಿಥ್ಯ: ಭಾರತ, ಪಾಕಿಸ್ಥಾನ, ಶ್ರೀಲಂಕಾ
ಚಾಂಪಿಯನ್: ಶ್ರೀಲಂಕಾ
ಪಂದ್ಯಶ್ರೇಷ್ಠ: ಅರವಿಂದ ಡಿ ಸಿಲ್ವ
ಮೊದಲ ಸಲ 3 ರಾಷ್ಟ್ರಗಳ ಆತಿಥ್ಯ. ಭಾರತ, ಪಾಕಿಸ್ಥಾನ ಜತೆಗೆ ಶ್ರೀಲಂಕಾದಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು. ವಿಲ್ಸ್ ಪ್ರಾಯೋಜಕತ್ವದಲ್ಲಿ ನಡೆದ “ಶಾಂತಿಗಾಗಿ ಕ್ರಿಕೆಟ್’ ಪಂದ್ಯಾವಳಿ ಇದಾಗಿತ್ತು. ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ನೂತನ ಚಾಂಪಿಯನ್ ಎನಿಸಿತು. * ವಿಶ್ವಕಪ್-7
ವರ್ಷ: 1999
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಶೇನ್ ವಾರ್ನ್
ಮತ್ತೆ ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ಪ್ರವೇಶಿಸಿತು. ಜತೆಗೆ ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್, ಹಾಲೆಂಡ್‌ನಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು. ಫೈನಲ್‌ನಲ್ಲಿ ಪಾಕಿಸ್ಥಾನವನ್ನು 8 ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿದ ಆಸ್ಟ್ರೇಲಿಯ 2ನೇ ಸಲ ಕಪ್ ಎತ್ತಿತ್ತು. ಹ್ಯಾಟ್ರಿಕ್ ಸಾಧನೆಗೆ ಮುನ್ನುಡಿ ಬರೆಯಿತು. * ವಿಶ್ವಕಪ್-8
ವರ್ಷ: 2003
ಆತಿಥ್ಯ: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ರಿಕಿ ಪಾಂಟಿಂಗ್
ಮೊದಲ ಸಲ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಆತಿಥ್ಯದಲ್ಲಿ ಪಂದ್ಯಾವಳಿ ಸಾಗಿತು. ಸರ್ವಾಧಿಕ 14 ತಂಡಗಳು ಪಾಲ್ಗೊಂಡವು. ಸೌರವ್ ಗಂಗೂಲಿ ಸಾರಥ್ಯದ ಭಾರತ ಅಮೋಘ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇರಿಸಿತು. ಆದರೆ ಆಸ್ಟ್ರೇಲಿಯವನ್ನು ತಡೆದು ನಿಲ್ಲಿಸಲು ವಿಫಲವಾಯಿತು. * ವಿಶ್ವಕಪ್-9
ವರ್ಷ: 2007
ಆತಿಥ್ಯ: ವೆಸ್ಟ್ ಇಂಡೀಸ್
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಆ್ಯಡಂ ಗಿಲ್‌ಕ್ರಿಸ್ಟ್
ವಿಶ್ವಕಪ್ ಇತಿಹಾಸದ ದುರಂತಮಯ ಕೂಟ. ಭಾರತ, ಪಾಕಿಸ್ಥಾನ ತಂಡಗಳು ಲೀಗ್ ಹಂತದಲ್ಲೇ ನಿರ್ಗಮಿಸಿದವು. ಆಸ್ಟ್ರೇಲಿಯ ಮತ್ತೆ ಫೈನಲ್‌ಗೆ ಲಗ್ಗೆ ಇರಿಸಿತು. ಮಳೆಪೀಡಿತ ಪ್ರಶಸ್ತಿ ಸಮರದಲ್ಲಿ ಶ್ರೀಲಂಕಾವನ್ನು ಡಿ-ಎಲ್ ನಿಯಮದನ್ವಯ ಸೋಲಿಸಿ ಹ್ಯಾಟ್ರಿಕ್ ಪೂರ್ತಿಗೊಳಿಸಿತು. * ವಿಶ್ವಕಪ್-10
ವರ್ಷ: 2011
ಆತಿಥ್ಯ: ಭಾರತ, ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ
ಚಾಂಪಿಯನ್: ಭಾರತ
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ
ಏಶ್ಯದ 4 ರಾಷ್ಟ್ರಗಳ ಆತಿಥ್ಯದಲ್ಲಿ ನಡೆದ ಪಂದ್ಯಾವಳಿ ಇದು. ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಕಣಕ್ಕಿಳಿದ ಭಾರತ ತಂಡ 2ನೇ ಸಲ ಕಪ್ ಎತ್ತಿ ಬರಗಾಲವೊಂದನ್ನು ನೀಗಿಸಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಉರುಳಿಸಿ ಟ್ರೋಫಿಯನ್ನು ಕ್ರಿಕೆಟ್ ದೇವರಿಗೆ ಅರ್ಪಿಸಿತು. * ವಿಶ್ವಕಪ್-11
ವರ್ಷ: 2015
ಆತಿಥ್ಯ: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಜೇಮ್ಸ್ ಫಾಕ್ನರ್
ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ 2ನೇ ಸಲ ಜಂಟಿಯಾಗಿ ಆಯೋಜಿಸಿದ ಈ ಪಂದ್ಯಾವಳಿಯಲ್ಲಿ ಈ ಎರಡು ತಂಡಗಳೇ ಫೈನಲ್‌ಗೆ ಲಗ್ಗೆ ಇರಿಸಿದವು. ಕಿವೀಸ್‌ಗೆ ಮೊದಲ ಪ್ರಶಸ್ತಿ ಸಮರವಾಗಿತ್ತು. ಆದರೆ ಆಸೀಸ್‌ಗೆ ಸಡ್ಡು ಹೊಡೆಯಲು ವಿಫಲವಾಯಿತು. ಕ್ಲಾರ್ಕ್ ಪಡೆ 7 ವಿಕೆಟ್‌ಗಳಿಂದ ಗೆದ್ದಿತು.