Advertisement

ಪ್ಯಾರೀಸ್‌, ಯುಕೆಗೆ ರಾಜ್ಯದಿಂದ 11 ಟನ್‌ ಮಾವು ರಫ್ತು

02:52 PM Jun 22, 2023 | Team Udayavani |

ಚಿಕ್ಕಬಳ್ಳಾಪುರ: ಏಷ್ಯಾದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶ ಎಂಬ ಹೆಗ್ಗಳಿಕೆ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇದೆ. ಇಲ್ಲಿ ಬೆಳೆ ಯುವ ತರಹೇವಾರಿ ಮಾವುಗೆ ವಿದೇಶ ದಲ್ಲೂ ಬೇಡಿಕೆ ಇದೆ. ಈ ಬಾರಿ ಮಾವು ಸುಗ್ಗಿ ಆರಂಭದಿಂದ ಬರೋಬ್ಬರಿ 11 ಟನ್‌ನಷ್ಟು ಮಾವು ವಿದೇಶಕ್ಕೆ ರಫ್ತಾಗಿದೆ.

Advertisement

ಹೌದು, ಹಣ್ಣುಗಳ ರಾಜ ಮಾವು ರುಚಿ ಆಸ್ವಾಧಿಸುವವರಿಗೆ ಅಷ್ಟೇ ಗೊತ್ತು. ಅದರಲ್ಲೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ಬಂಗನಪಲ್ಲಿ, ಬಾದಾಮಿ, ಮಲ್ಲಿಕಾ, ನೀಲ, ದಶೇಹರಿ ಮತ್ತಿತರ ಉತ್ಕೃಷ್ಟ ಮಾವು ವಿದೇಶಗಳಲ್ಲಿನ ಗ್ರಾಹಕರನ್ನು ಸೆಳೆಯುತ್ತವೆ.

ಪ್ರತಿ ವರ್ಷ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ಮಾವುನ್ನು ವಿದೇಶಗಳಿಗೂ ರಫ್ತು ಮಾಡಿಕೊಂಡು ಬರುತ್ತಿದ್ದು, ಈ ವರ್ಷ ಇಲ್ಲಿವರೆಗೂ 11 ಟನ್‌ನಷ್ಟು ಮಾವು ವಿದೇಶಗಳಿಗೆ ರಪು¤ ಆಗಿದೆ ಎಂದು ಮಾವು ಸಂಸ್ಕರಣೆ ಹಾಗೂ ಪ್ಯಾಕಿಂಗ್‌ ಮಾಡಿ ವಿದೇಶಕ್ಕೆ ರಫ್ತು ಮಾಡುವ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೆರೆ ಸಮೀಪ ಇರುವ ಮಾವು ಸಂಸ್ಕರಣೆ ಘಟಕದ ನಿರ್ದೇಶಕರು ಉದಯವಾಣಿಗೆ ತಿಳಿಸಿದರು.

ಈ ಬಾರಿ ಬಂಗನಪಲ್ಲಿ ಮಾವು ಸುಮಾರು 7.10 ಟನ್‌, ಮಲ್ಲಿಕಾ 2.510 ಟನ್‌, ಬಾದಾಮಿ 2 ಟನ್‌ನಷ್ಟು ವಿದೇಶಗಳಿಗೆ ರಫ್ತು ಆಗಿದೆ. ವಿಶೇಷವಾಗಿ ಜಿಲ್ಲೆಯ ಬಂಗನಪಲ್ಲಿ, ಬಾದಾಮಿ ಹಾಗೂ ಮಲ್ಲಿಕಾ ಈ ಬಾರಿ ನೆದರ್‌ಲ್ಯಾಂಡ್‌, ಕೆನಡಾ, ಯುಕೆ, ರಷ್ಯಾ, ಪ್ಯಾರೀಸ್‌ ಮತ್ತಿತರ ದೇಶಗಳಿಗೆ ಹೋಗಿದೆ.

ಕೊರೊನಾದಿಂದ ಎರಡು ವರ್ಷ ಕುಸಿತ: ಕೊರೋನಾ ಸೋಂಕು ಇದ್ದ ಕಾರಣಕ್ಕೆ 2-3 ವರ್ಷದಿಂದ ಮಾವು ರಫ್ತು ಕುಸಿತ ಕಂಡಿದೆ. ಆದರೆ 2019 ರಲ್ಲಿ 10 ರೈತರಿಂದ 25.10 ಟನ್‌ ಮಾವು ವಿದೇಶಗಳಿಗೆ ರಫ್ತು ಆಗಿತ್ತು. ಮೊದ ಮೊದಲು ಒಂದರೆಡು ದೇಶಗಳಿಗೆ ಮಾತ್ರ ಸೀಮಿತವಾಗಿದ್ದ ರಫ್ತು ಇತ್ತೀಚಿನ ದಿನಗಳಲ್ಲಿ ಸಿಂಗಾಪೂರ್‌, ದುಬೈ, ಜರ್ಮನಿ, ಫ್ರಾನ್ಸ್‌, ಲಂಡನ್‌ ಇಂಗ್ಲೆಂಡ್‌ಗೆ ರಾಜ್ಯದ ಅದರಲ್ಲೂ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ಮಾವು ಹೆಚ್ಚಿನ ಪ್ರಮಾಣದಲ್ಲಿ ರಪು¤ ಆಗುವ ಮೂಲಕ ವಿದೇಶದಲ್ಲೂ ಬೇಡಿಕೆ ಸೃಷ್ಟಿಯಾಗಿದೆ.

Advertisement

8 ಮಂದಿ ರೈತರಿಂದ ಖರೀದಿ: ಜಿಲ್ಲೆಯ ಸುಮಾರು 8 ಮಂದಿ ರೈತರಿಂದ ಖರೀದಿಸಿದ ಗುಣಮಟ್ಟದ ಮಾವನ್ನು ಮಾವು ಸಂಸ್ಕರಣಾ ಘಟಕದ ಅಧಿಕಾರಿಗಳು ವಿಶೇಷ ಪ್ಯಾಕಿಂಗ್‌ ವ್ಯವಸ್ಥೆ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಕೆಲಸದಲ್ಲಿ ತೊಡಗಿದ್ದು, ಮಾವಿನ ಸುಗ್ಗಿ ಮುಗಿಯುವುದರೊಳಗೆ ಸುಮಾರು 15 ರಿಂದ 20 ಟನ್‌ ಮಾವು ವಿದೇಶಗಳಿಗೆ ಸರಬರಾಜು ಮಾಡುವ ಗುರಿ ಇದೆ ಎಂದು ಜೊತೆಗೆ ಬೇಡಿಕೆ ಎಂದು ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವರ್ಷ ಬಾದಾಮಿ, ಮಲ್ಲಿಕಾ, ಬಂಗನಪಲ್ಲಿ ಮತ್ತಿತರ ಮಾವು ವಿದೇಶಗಳಿಗೆ ಸುಮಾರು 11 ಟನ್‌ಷ್ಟು ಮಾವು ರಫ್ತು ಆಗಿದೆ. ವಿಶೇಷವಾಗಿ ಪ್ಯಾರೀಸ್‌, ನೆದರ್‌ಲ್ಯಾಂಡ್‌, ರಷ್ಯಾ, ಕೆನಡ ದೇಶಗಳಿಂದಲೂ ಬೇಡಿಕೆ ಬಂದಿದೆ. -ರಮಾದೇವಿ, ನಿರ್ದೇಶಕರು ಮಾವು ಸಂಸ್ಕರಣಾ ಕೇಂದ್ರ, ಮಾಡಿಕೆರೆ. ಚಿಂತಾಮಣಿ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next