ಮಂಗಳೂರು: ಮಂಗಳೂರು ನಗರದ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯ ಸೇವನೆ ಮಾಡಿರುವ 11 ಮಂದಿಯನ್ನು ಬಂಧಿಸಿದ್ದಾರೆ.
ಶನಿವಾರದಂದು ವಳಚ್ಚಿಲ್ ಪದವಿನ ವ್ಯೂವ್ ಪಾಯಿಂಟ್‌ನಲ್ಲಿ ಕೇರಳದ ಪ್ರಣವ್ ಕೆ.ವಿ. (20) ಮತ್ತು ಅಡಲ್ ಕೃಷ್ಣ (20)ನನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಜು. 20ರಂದು ಬಂಧಿಸಿದ್ದಾರೆ.
ಮುಲ್ಲಕಾಡಿನ ಮುಲ್ಲರ್ ಫಾರ್ಮ್ ನ ಎದುರು ಮಾದಕ ದ್ರವ್ಯ ಸೇವನೆ ಮಾಡಿದ್ದ ಕೇರಳದ ಮೊಹಮ್ಮದ್ ಹರ್ಷಿನ್ (24), ಮಹಮ್ಮದ್ ಸಿನಾನ್ ಎಂ.ಬಿ. (21), ಪ್ರಯಾಗ್ ಎಂ. (19), ಅನುರಾಗ್ (19), ಅರುಣ್ ಜೆ. (19), ಹರಿಕೃಷ್ಣನ್ ಎಂ. (20)ನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಣ್ಣೂರು ಜಂಕ್ಷನ್ ಬಳಿಯ ಮೈದಾನದ ಬಳಿ ಮಾದಕ ವಸ್ತು ಸೇವನೆ ಮಾಡಿದ್ದ ಇಬ್ರಾಹಿಂ ಸುಫೈದ್‌ನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜಪ್ಪು ಕುಡ್ಪಾಡಿ ರೈಲ್ವೇ ಓವರ್ ಬ್ರಿಡ್ಜ್ ನ ಕೆಳಗಡೆ ಡ್ರಗ್ಸ್ ಸೇವನೆ ಮಾಡಿದ್ದ ಜೆಪ್ಪು ಬಪ್ಪಾಲ್‌ನ ಸೌರಾಜ್ (22) ಮತ್ತು ರಾಘವೇಂದ್ರ(21)ನನ್ನು ಮಂಗಳೂರು ನಗರದ ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.