ಕೋಲಾರ: ಜಿಲ್ಲೆಯಲ್ಲಿ ಕೋವಿಡ್ 19 ಆರ್ಭಟ ಮುಂದುವರಿದಿದ್ದು, ಶುಕ್ರವಾರ 11 ಮಂದಿಯಲ್ಲಿ ಪಾಸಿಟೀವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 150ಕ್ಕೇರಿದೆ. ಕೋಲಾರ 5, ಮುಳಬಾಗಿಲು 1, ಮಾಲೂರು-1, ಬಂಗಾರಪೇಟೆ ಮತ್ತು ಕೆಜಿಎಫ್ ತಲಾ 2 ಮಂದಿ ಸೋಂಕಿತರಾಗಿದ್ದಾರೆ. ಇವರಲ್ಲಿ ಕೋಲಾರದ 53 ವರ್ಷದ ಪುರುಷ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
28 ವರ್ಷದ ಪುರುಷ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಸೋಂಕಿತರಾ ಗಿದ್ದಾರೆ. 35 ವರ್ಷದ ಪುರುಷ ಪಿ.12003 ಸಂಪರ್ಕದಿಂದ ಸೋಂಕಿತರಾಗಿದ್ದಾರೆ. 46 ವರ್ಷ, 32 ವರ್ಷದ ಪುರುಷ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕು ತಗುಲಿದೆ. ಕೆಜಿಎಫ್‌ನ 57 ವರ್ಷದ ಪುರುಷ ಉಸಿರಾಟದ ತೊಂದರೆ ಮತ್ತು 25 ವರ್ಷದ ಮಹಿಳೆ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಸೋಂಕಿತ ರಾಗಿದ್ದಾರೆ.
ಬಂಗಾರಪೇಟೆಯ 18 ವರ್ಷದ ಯುವತಿ ಪಿ.15407 ರೋಗಿಯಿಂದ ಸಂಪರ್ಕ ದಿಂದ ಸೋಂಕಿತರಾಗಿದ್ದಾರೆ. 45 ವರ್ಷದ ಮಹಿಳೆ ಪಿ.11999 ರೋಗಿಯಿಂದ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಮುಳಬಾಗಿಲಿನ 62 ವರ್ಷದ ಪುರುಷ ಪಿ.12003 ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಮಾಲೂರಿನ 30 ವರ್ಷದ ಮಹಿಳೆ ಪ್ರಯಾಣದ ಹಿನ್ನೆಲೆ ಹೊಂದಿ ಸೋಂಕಿತರಾಗಿದ್ದಾರೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದ್ದು, ಕೆಲವರು ಎಸ್‌ಎನ್‌ಆರ್ ಆಸ್ಪತ್ರೆ ಹಾಗೂ ಕೆಲವು ರೋಗಿಗಳು ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ ಒಟ್ಟು 62 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಈಗ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 86 ಆಗಿದೆ. ತುರ್ತು ನಿಗಾ ಘಟಕದಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಸಾವು ಸಂಭವಿಸಿದ ನಂತರ ಎರಡು ಪ್ರಕರಣಗಳಲ್ಲಿ ಪಾಸಿಟೀವ್ ಎಂದು ದಾಖಲಾಗಿದೆ. ಜಿಲ್ಲೆಯಲ್ಲಿ ಈಗ 2305 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 12271 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 10735 ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ.