ಇರಾನ್ (ಡಮಾಸ್ಕಸ್): ಸಿರಿಯಾದ ಡಮಾಸ್ಕಸ್ ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಇರಾನಿಯನ್ ರೆವಲ್ಯೂಶನರಿ ಗಾರ್ಡ್ಸ್ ನ ಮುಖ್ಯ ಕಮಾಂಡರ್ ಸೇರಿದಂತೆ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Video: ಏಕಾಏಕಿ ಮೈದಾನಕ್ಕೆ ಓಡಿ ಬಂದ ಅಭಿಮಾನಿ… ಬೆಚ್ಚಿ ಬಿದ್ದ ರೋಹಿತ್ ಶರ್ಮ
ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಹಿರಿಯ ಕಮಾಂಡರ್ ಗಳಾದ ಮೊಹಮ್ಮದ್ ರೇಜಾ ಜಹೇದಿ ಮತ್ತು ಮೊಹಮ್ಮದ್ ಹಾಜಿ ರಹೀಮಿ ಸೇರಿದಂತೆ ಏಳು ಅಧಿಕಾರಿಗಳು ಹತ್ಯೆಯಾದವರಲ್ಲಿ ಸೇರಿರುವುದಾಗಿ ಐಆರ್ ಜಿಸಿ ದೃಢಪಡಿಸಿದೆ.
ಈ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಆದರೆ ದಾಳಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಅಧಿಕಾರಿಗಳು ಶಪಥಗೈದಿರುವುದಾಗಿ ವರದಿ ವಿವರಿಸಿದೆ.
ಇಸ್ರೇಲ್ ಮಿಸೈಲ್ ದಾಳಿಗೆ ಇರಾನ್ ದೂತಾವಾಸ ಕಟ್ಟಡ ಸಂಪೂರ್ಣ ಧ್ವಂಸಗೊಂಡಿರುವುದಾಗಿ ವರದಿ ತಿಳಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದ್ದು, ದಾಳಿಯನ್ನು ಖಂಡಿಸುವುದಾಗಿ ಡಮಾಸ್ಕಸ್ ನಲ್ಲಿರುವ ಇರಾನ್ ರಾಯಭಾರಿ ಹೊಸೈನ್ ಅಕ್ಬರಿ ತಿಳಿಸಿದ್ದಾರೆ.
ದಿ ಜೆರುಸಲೇಮ್ ಪೋಸ್ಟ್ ವರದಿ ಪ್ರಕಾರ, ಲೆಬನಾನ್ ಗೆ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡವಲ್ಲಿ ಜಹೇದಿ ಪ್ರಮುಖ ಸೂತ್ರಧಾರಿಯಾಗಿದ್ದ ಎಂದು ತಿಳಿಸಿದೆ.