Advertisement
ಕೋಟೇಶ್ವರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಡನೆ ಮಾತನಾಡಿದರು. ಸರಕಾರ ಮತ್ತು ಟಾಟಾ ಟೆಕ್ನಾಲಜಿ ಸೇರಿ ಮಾಡುತ್ತಿರುವ ಪರಿಷ್ಕೃತ ಶಿಕ್ಷಣ ಪದ್ಧತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ವ್ಯವಸ್ಥೆಯಿಂದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂದರು.
ರಾಜ್ಯದಲ್ಲಿ ವಿಶ್ವ ದರ್ಜೆಯ ಐಟಿಐ ಕಾಲೇಜುಗಳು ನಿರ್ಮಾಣಗೊಳ್ಳುತ್ತಿವೆ. ಈಗಾಗಲೇ ಇರುವ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮಾದರಿಯಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯವು ಆವಿಷ್ಕಾರ ಹಾಗೂ ತಂತ್ರಜ್ಞಾನದಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ:ಪ್ರಧಾನಿ ಬದ್ಧತೆಗೆ ಶ್ಲಾಘನೆ : ಮೋದಿ ನಾಯಕತ್ವಕ್ಕೆ ಲಸಿಕೆ ತಯಾರಕ ಕಂಪನಿಗಳ ಮೆಚ್ಚುಗೆ
Related Articles
ರಾಜ್ಯದಲ್ಲಿ ಶೇ. 85ರಷ್ಟು ಮಂದಿಗೆ ಕೋವಿಡ್ ಲಸಿಕೆಯ ಪ್ರಥಮ ಡೋಸ್ ನೀಡಲಾಗಿದೆ. 2ನೇ ಡೋಸ್‌ನಲ್ಲೂ ಮುಂಚೂಣಿಯಲ್ಲಿದೆ. ಕೋವಿಡ್‌ನ ಸಾಧಕ-ಬಾಧಕ ಅರಿತು ಮುಂಜಾಗ್ರತಾ ಕ್ರಮವಾಗಿ ಹಲವಾರು ಕಠಿನ ಕ್ರಮಗಳನ್ನು ಕೈಗೊಂಡಿರುವುದರಿಂದ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದರು.
Advertisement
ಪಾಶ್ಚಿಮಾತ್ಯ ರಾಷ್ಟ್ರಗಳು ಕರ್ನಾಟಕವನ್ನು ಎದುರು ನೋಡುತ್ತಿದ್ದು, ಅರಬ್ ದೇಶಗಳ ಸಹಿತ ವಿವಿಧ ರಾಷ್ಟ್ರಗಳು ಇಲ್ಲಿ ಬಂಡವಾಳ ಹೂಡಲು ಬರುತ್ತಿವೆ ಎಂದು ತಿಳಿಸಿದರು.ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.