Advertisement

11 ಮದ್ಯದಂಗಡಿ ಪರವಾನಗಿ ರದ್ದು

05:06 PM Apr 12, 2020 | mahesh |

ಮೈಸೂರು: ಲಾಕ್‌ಡೌನ್‌ ಇದ್ದರೂ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿದ 11 ಮದ್ಯದಂಗಡಿ ಪರವಾನಗಿ  ಅಮಾನತುಗೊಳಿಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಬಿ.ಮಾದೇಶ್‌ ತಿಳಿಸಿದ್ದಾರೆ. ಪರವಾನಗಿದಾರರು ಮದ್ಯ ಮಾರಾಟ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಮಾ.23ರಿಂದ ಏ.10 ರವರೆಗೆ ಮೈಸೂರು ವಿಭಾಗ ವ್ಯಾಪ್ತಿಗೆ ಒಳಪಡುವ 5 ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 33 ವಲಯ ಕಚೇರಿ, 69 ಉಪವಿಭಾಗ ಕಚೇರಿ ಹಾಗೂ 5 ಜಿಲ್ಲಾ ಕಚೇರಿಗಳಲ್ಲಿ ಇಲಾಖೆ ಸಿಬ್ಬಂದಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಈ ವಿಭಾಗ ವ್ಯಾಪ್ತಿಗಳಲ್ಲಿ ಇಲ್ಲಿಯವರೆಗೆ ಒಟ್ಟು 1,577 ದಾಳಿ ನಡೆಸಿ 53 ಘೋರ, 06 ಕಲಂ 15ಎ ಪ್ರಕರಣ, 25
ಸಾಮಾನ್ಯ ಪ್ರಕರಣ ದಾಖ ಲಿಸಿ, 23 ಆರೋಪಿಗಳನ್ನು ಬಂಧಿಸಿದ್ದು, 371 ಲೀ. ಮದ್ಯ, 36 ಲೀ. ಬಿಯರ್‌, 40 ಲೀ. ಸೇಂದಿ, 52 ಲೀ. ಕಳ್ಳಭಟ್ಟಿ, 10 ಲೀ. ವೈನ್‌, 515 ಲೀ. ಕೊಳೆ , 11 ವಾಹನ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮಧ್ಯ ಮಾರಾಟದ ಬಗ್ಗೆ ದೂರುಗಳಿದ್ದಲ್ಲಿ ಜಿಲ್ಲೆಗಳ ಕಂಟ್ರೋಲ್‌ ರೂಂ ಸಂಪರ್ಕಿಸಿ ದೂರು ನೀಡಬಹುದಾಗಿದೆ.

Advertisement

ಈ ವಿಭಾಗದ ವ್ಯಾಪ್ತಿಯಲ್ಲಿ ಬರುವ ಡಿಸ್ಟಿಲರಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಡಿಸ್ಟಲರಿಗಳಿಂದ ಆಲ್ಕೋಹಾಲ್‌ ಬೇಸ್ಡ್ ಸ್ಯಾನಿಟೈಸರ್‌ ಸರಬರಾಜು ಮಾಡುತ್ತಿದ್ದು, ಮೈಸೂರು ವಿಭಾಗಕ್ಕೆ ಒಳಪಡುವ 5 ಜಿಲ್ಲೆಗಳಿಂದ ಒಟ್ಟಾರೆ 3,975 ಲೀ. ಸ್ಯಾನಿಟೈಸರ್‌ ಗಳನ್ನು ವಿಭಾಗದ ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಬಿ.ಮಾದೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next