Advertisement
ಬಳಿಕ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಬೈಕಂಪಾಡಿ ಕೈಗಾರಿಕಾ ಪ್ರಾಂಗಣಕ್ಕೆ ದೊಡ್ಡ ಮೊತ್ತ ನೀಡಲಾಗಿದೆ. ಚರಂಡಿ, ಫುಟ್ ಪಾತ್, ಉತ್ತಮ ರಸ್ತೆ ನಿರ್ಮಾಣ ಮಾಡಿ ಕೈಗಾರಿಕಾ ವಲಯದ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಕೆಐಎಡಿಬಿ ಕಚೇರಿಯಿಂದ ಅಂಗರಗುಂಡಿ ಮೂಲಕ ಜೋಕಟ್ಟೆ ಮಾಡಿಲ ಸೇತುವೆಯವರೆಗೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ರಸ್ತೆ ಉಡುಪಿ, ಸುರತ್ಕಲ್ ಮತ್ತಿತರೆಡೆಗಳಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವವರಿಗೆ ಅನುಕೂಲ ಕಲ್ಪಿಸಲು ಜೋಕಟ್ಟೆ ಮಾರ್ಗವಾಗಿ ಕೆಂಜಾರು ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದಾಗಿ ಸುಮಾರು ಐದು ಕಿ.ಮೀ. ಪ್ರಯಾಣ ಕಡಿತವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಹೇಮಂತ್, ನಾಸೀರ್ ಲಕ್ಕಿಸ್ಟಾರ್, ನಝೀರ್, ಅಸ್ಗರ್ ಆಲಿ, ಸದಾಶಿವ ಶೆಟ್ಟಿ, ನವೀನ್ ಶ್ರೀಯಾನ್, ಹಾರೀಸ್, ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು.