ದಾವಣಗೆರೆ: ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಮಹಾಮಾರಿ ಕೋವಿಡ್ ದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ದಾವಣಗೆರೆಯ ಆಜಾದ್ ನಗರದ ಒಂದನೇ ಮುಖ್ಯ ರಸ್ತೆ ಹನ್ನೊಂದನೇ ಕ್ರಾಸ್ ನಿವಾಸಿ 53 ವರ್ಷದ ವ್ಯಕ್ತಿ (ರೋಗಿ ನಂಬರ್ 18102) ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜು.1 ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 53 ವರ್ಷದ ವ್ಯಕ್ತಿ (ರೋಗಿ ನಂಬರ್ 21680) ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಜೂ. 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ 11 ಜನರು ಕೋವಿಡ್ ದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಒಂದೇ ಕುಟುಂಬದ ನಾಲ್ವರು ಒಳಗೊಂಡಂತೆ 11 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 58 ವರ್ಷದ ವ್ಯಕ್ತಿ (ರೋಗಿ ನಂಬರ್ 21680) ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದು ಕೋವಿಡ್ ದೃಢಪಟ್ಟಿದೆ.
ತೀವ್ರ ಶೀತದಿಂದ ದಾವಣಗೆರೆಯ ನಿಟುವಳ್ಳಿಯ 25 ವರ್ಷದ ಯುವಕ(ರೋಗಿ ನಂಬರ್ 21681) ಮತ್ತು ಹರಿಹರದ ಎಪಿಎಂಸಿ ಪ್ರದೇಶ ನಿವಾಸಿ 30 ವರ್ಷದ ವ್ಯಕ್ತಿಗೆ (ರೋಗಿ ನಂಬರ್ 21682) ಸೋಂಕು ಹರಡಿದೆ. ರೋಗಿ ನಂಬರ್ 10389 ಸಂಪರ್ಕದಿಂದ ದಾವಣಗೆರೆಯ ಬೀಡಿ ಲೇಔಟ್‌ನ 48 ವರ್ಷದ ವ್ಯಕ್ತಿ (ರೋಗಿ ನಂಬರ್ 21683),26 ವರ್ಷದ ಮಹಿಳೆ (ರೋಗಿ ನಂಬರ್ 21685) ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 16672 ಸಂಪರ್ಕದಿಂದ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆಯ 39 ವರ್ಷದ ಮಹಿಳೆ (ರೋಗಿ ನಂಬರ್ 21684) ಸೋಂಕು ಹರಡಿದೆ. ರೋಗಿ ನಂಬರ್ 21687 ಸಂಪರ್ಕದಿಂದ ದಾವಣಗೆರೆಯ ನಂದಿನಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆಗೆ (ರೋಗಿ ನಂಬರ್ 216868) ಸೋಂಕು ದೃಢಪಟ್ಟಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್‌ನಿಂದ ವಾಪಾಸ್ಸಾಗಿರುವ ದಾವಣಗೆರೆಯ ಎಸ್.ಎಸ್. ಅಪಾರ್ಟ್ ಮೆಂಟ್ ಲೇ ಔಟ್‌ನ 38 ವರ್ಷದ ವ್ಯಕ್ತಿ (ರೋಗಿ ನಂಬರ್ 21687), 32 ವರ್ಷದ ಮಹಿಳೆ (ರೋಗಿ ನಂಬರ್ 21688), 5 ವರ್ಷದ ಬಾಲಕಿ (ರೋಗಿ ನಂಬರ್ 21689), 7 ವರ್ಷದ ಬಾಲಕ (ರೋಗಿ ನಂಬರ್ 21690) ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ದಿಂದ ಗುಣಮುಖರಾದ ರೋಗಿ ನಂಬರ್ 10986, 15376, 15377, 15378, 15381, 15382, 15387 ಭಾನುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 356 ಪ್ರಕರಣಗಳಲ್ಲಿ ಈವರೆಗೆ 301 ಜನರು ಡಿಸ್ಚಾರ್ಜ್ ಆಗಿದ್ದಾರೆ. 11 ಜನರು ಸಾವನ್ನಪ್ಪಿದ್ದಾರೆ. 44 ಸಕ್ರಿಯ ಪ್ರಕರಣಗಳಿವೆ.